ಕಾಕೋಳದಲ್ಲಿ ಪಾಟೀಲರ ಜಯಂತಿ ಆಚರಣೆ

3-RNR-05
filter: 0; fileterIntensity: 0.0; filterMask: 0; module: photo; hw-remosaic: false; touch: (-1.0, -1.0); sceneMode: 2; cct_value: 0; AI_Scene: (-1, -1); aec_lux: 296.872; aec_lux_index: 0; albedo: ; confidence: ; motionLevel: -1; weatherinfo: null; temperature: 36;
Published on

ರಾಣೆಬೆನ್ನೂರ: ಸ್ವಾತಂತ್ರ$್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಪ್ರಾದೇಶಿಕವಾಗಿ ಸ್ಮರಿಸುವ ನಿಟ್ಟಿನಲ್ಲಿ ಸ್ಥಳಿಯರ ಅಭಿಮಾನ ಮತ್ತು ಸಹಕಾರ ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಆಯಾ ಗ್ರಾಪಂಗಳು ಠರಾವು ಪಾಸು ಮಾಡುವ ಮೂಲಕ ತಮ್ಮ ವ್ಯಾಪ್ತಿಯ ನೆಲದ ನಾಯಕರನ್ನು ನವಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಬೇಕು. ಅಂದಾಗ ಮಾತ್ರ ಹಿರಿಯರ ನಿಸ್ವಾರ್ಥ ಸೇವೆಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗ್ರಾಮ ಸ್ವರಾಜ್​ ಅಭಿಯಾನದ ರಾಜ್ಯ ಸಂಚಾಲಕ ಆವರಗೆರೆ ರುದ್ರಮುನಿ ಹೇಳಿದರು.

ತಾಲೂಕಿನ ಕಾಕೋಳ ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ$್ಯ ಹೋರಾಟಗಾರ ಹಾಗೂ ಏಕೀಕರಣ ರೂವಾರಿ ಕರ್ಮಯೋಗಿ ಕೆ.ಎಫ್​. ಪಾಟೀಲರ 120ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹುತಾತ್ಮ ಮೈಲಾರ ಮಹಾದೇವಪ್ಪ ಹಾಗೂ ಸ್ವಾತಂತ್ರ$್ಯ ಸೇನಾನಿ ಸಂಗೂರ ಕರಿಯಪ್ಪ ಅವರ ವಿದ್ಯಾಗುರುಗಳಾದ ಕೆ.ಎಫ್​.ಪಾಟೀಲರು ತಮ್ಮ ಶಿಷ್ಯ ಸಮೂಹವನ್ನು ಸ್ವಾತಂತ್ರ$್ಯ ಹೋರಾಟಕ್ಕೆ ಹುರಿದುಂಬಿಸಿದ್ದರು. ರಾಜಕಾರಣದಲ್ಲಿದ್ದರೂ ದೂರದೃಷ್ಟಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದರು. ಜೊತೆಗೆ ಶೈಕ್ಷಣಿಕ ಕಾಳಜಿ ಕಾರಣಕ್ಕೆ ವಿದ್ಯಾ ಸಂಸ್ಥೆಗಳನ್ನು ಆರಂಭಿಸಿ ತಮ್ಮ ಕಾಳಜಿ ಮೆರೆದಿದ್ದರು. ಇಂಥ ಮಹನೀಯರನ್ನು ಸ್ಮರಿಸುವ ಕಾರಣಕ್ಕೆ ಕಳೆದ ಹತ್ತು ವರ್ಷಗಳಿಂದ ಗ್ರಾಮ ಸ್ವರಾಜ್​ ಅಭಿಯಾನ ಮೂಲಕ ನಿರಂತರ ವಿಧಾಯಕ ಕಾರ್ಯ ಮಾಡುತ್ತಿದ್ದೇವೆ. ಸ್ಥಳಿಯರೂ ತಮ್ಮೂರಿನ ಹೋರಾಟಗಾರರನ್ನು ಸ್ಮರಿಸುವ ಕಾರ್ಯ ಮಾಡಬೇಕು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಗುಡದೇಶ ಸೂರಣಗಿ ಮಾತನಾಡಿ, ಬಡತನದಲ್ಲಿ ಬೆಳೆದು ರಿಂಗ್​ ಲೀಡರ್​ ಆಗಿ ಗುರುತಿಸಿಕೊಂಡ ಕೆ.ಎಫ್​.ಪಾಟೀಲರಿಗೆ ಶೈಕ್ಷಣಿಕ ಸಂಗತಿಗಳಲ್ಲಿ ಅರಿವಿತ್ತು. ಇದೇ ಕಾರಣಕ್ಕೆ ನಮ್ಮೂರಿನ ಪ್ರಾಥಮಿಕ ಶಾಲೆಗೆ ವಜ್ರದುಂಡಿ ಕಲ್ಲುಗಳಿಂದ ಕಟ್ಟಡ ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಎರಡು ಬಾವಿಗಳನ್ನು ನಿಮಿರ್ಸಲು ಶ್ರಮಿಸಿದ್ದರು. ತಾವು ಕೂಡಿಟ್ಟ ಹಣದಲ್ಲಿ ಹಾವೇರಿ ಹಾಗೂ ರಾಣೆಬೆನ್ನೂರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು. ಈ ಮೂಲಕ ನವಭಾರತ ನಿಮಾರ್ಣಕ್ಕೆ ಶಿಕ್ಷಣದ ಮಹತ್ವವನ್ನು ತೋರಿಸಿಕೊಟ್ಟ ಅವರು ನಮ್ಮೂರಿನ ಪ್ರಾತಃಸ್ಮರಣೀಯರು ಎಂದರು.

ಎಸ್​ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ ಕೂರಗುಂದ, ಪ್ರಮುಖರಾದ ಮಾಲತೇಶ ಶಿಡಗನಾಳ, ಗೂಳಪ್ಪ ಅರಳಿಕಟ್ಟಿ, ಶಿವಾನಂದ ಕಡೇಮನಿ, ಸಿದ್ಧಾರೂಢ ಕೂನಬೇವು, ರುದ್ರಪ್ಪ ಕಿವುಡನವರ, ಬರಲಿಂಗಪ್ಪ ಅಸುಂಡಿ, ಮಹದೇವಪ್ಪ ಹಿರೇಬಿದರಿ, ದೀಪಾ ಹಿತ್ತಲಮನಿ, ಲಕ್ಷ$್ಮವ್ವ ಕೊಂಬಳಿ, ಮುಖ್ಯ ಶಿಕ್ಷಕ ಬಿ.ಜೆ. ಯಲಿಗಾರ, ಸಹ ಶಿಕ್ಷಕರಾದ ಎಂ.ವಿ. ಗಜೇಂದ್ರಗಡ, ಮಹೇಶ ಬಿ.ಜಿ., ಚನ್ನಬಸಮ್ಮ ಜೆ., ಸುಧಾ ಡಿ.ಎಸ್​, ವಿಜಯಲಕ್ಷಿ$್ಮ ದೇಶಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net