

ರಾಣೆಬೆನ್ನೂರ: ಇಲ್ಲಿಯ ಕಾಕಿ ಗಲ್ಲಿಯ ವಿಜಯಲಕ್ಷಿ$್ಮ ಹವ್ಯಾಸಿ ಸಂದ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ನಗರದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
ವಿಸರ್ಜನಾ ಮೆರವಣಿಗೆ ಅಂಗವಾಗಿ ಬೆಳಗ್ಗೆಯಿಂದಲೇ ಪೂಜಾ ಕಾರ್ಯ ಕೈಗೊಳ್ಳಲಾಗಿತ್ತು. ನಂತರ ಶೋಭಾಯಾತ್ರೆ ಆರಂಭಗೊಂಡಿತು. ಕಾಗಿಗಲ್ಲಿಯಿಂದ ಹೊರಟ ಮೆರವಣಿಗೆಯು ನಾಡಿಗೇರ ಓಣಿ, ಹಳೆ ಸರ್ಕಾರಿ ಆಸ್ಪತ್ರೆ, ಕುರುಬಗೇರಿ ಕ್ರಾಸ್, ದುರ್ಗಾ ಸರ್ಕಲ್, ನೆಹರು ಮಾರುಕಟ್ಟೆ, ಎಮ್.ಜಿ.ರಸ್ತೆ, ಚಕ್ಕಿಮಿಕ್ಕಿ ಸರ್ಕಲ್, ಪೋಸ್ಟ್ ಸರ್ಕಲ್, ಮೇಡ್ಲೇರಿ ಕ್ರಾಸ್, ಬಸ್ ನಿಲ್ದಾಣ, ರಾಜರಾಜೇಶ್ವರಿ ನಗರ ಹಾಗೂ ಹಳೇ ಪಿ.ಬಿ.ರಸ್ತೆ ಮೂಲಕ ತೆರಳಿ ಹರಿಹರ ತುಂಗಾಭದ್ರ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು.
ನಾಸಿಕ್ ಡೋಲ್, ವೀರಗಾಸೆ, ಪುರವಂತರ ಸಮಾಳ ಮೇಳ, ಡೊಳ್ಳು, ಭಜನೆ, ಜನಪದ ನೃತ್ಯ, ಕೇರಳದ ವಾದ್ಯ, ಹನುಮಾನ್ ವೇಷಭೂಷಣಗಳು ಸೇರಿ ಮುಂತಾದ ಕಲಾ ತಂಡಗಳು ಹಾಗೂ ಯುವಕ- ಯುವತಿಯರಿಗೆ ಡಿಜೆ ಶೋಭಾಯಾತ್ರೆ ವಿಶೇಷ ಆಕರ್ಷಣೆಯಾಗಿದ್ದವು.
ಪ್ರಮುಖರಾದ ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ, ಪ್ರಕಾಶ ಕಾಕಿ, ಸಂತು ಸುಣಗಾರ, ಅಭಿಲಾಷ ಬ್ಯಾಡಗಿ, ನಾಗರಾಜ ಕಾಕಿ, ರಾಮಣ್ಣ ಕಾಕಿ, ಮಂಜುನಾಥ ಅಜ್ಜೇವಡಿ, ಮಂಜುನಾಥ ಕಬ್ಬಿಣಕಂತಿಮಠ, ಶೇಖಪ್ಪ ಕಾಕಿ, ಜಗದೀಶ ಬಣಗಾರ, ಉಮೇಶ ಕಾಕಿ, ರೂಪಾ ಕಾಕಿ, ಶ್ರೀಧರ ಅಮಾಸಿ ಸೇರಿ ನೂರಾರು ಜನ ಪಾಲ್ಗೊಂಡಿದ್ದರು.