ಕಾಕಿ ಜನಸೇವಾ ಸಂಸ್ಥೆಯಿಂದ ಉಚಿತ ಸಾಮೂಹಿಕ ವಿವಾಹ ಡಿ. 23ರಂದು

15-RNR-04
Published on

ರಾಣೆಬೆನ್ನೂರ: ಬಡವರಿಗೆ ಅನುಕೂಲವಾಗುವ ದೃಷ್ಠಿಯಿಂದ ನಗರದ ಹುಣಸಿಕಟ್ಟಿ ರಸ್ತೆಯಲ್ಲಿ ಜೆಸಿ ಅರಮನೆ ನಿಮಿರ್ಸಲಾಗಿದ್ದು ಅದನ್ನು ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಆಚರಣೆಯೊಂದಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ತಿಳಿಸಿದರು.

ನಗರದ ಕಾಕಿ ಜನಸೇವಾ ಸಂಸ್ಥೆ ಸಭಾಭವನದಲ್ಲಿ ಡಿ. 23ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲಿರುವ ವಧು&-ವರರಿಗೆ ಭಾನುವಾರ ಮದುವೆ ಬಟ್ಟೆ ವಿತರಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಶ್ರೀ ನೀಲಕಂಠೇಶ್ವರ ಕಾತಿರ್ಕೋತ್ಸವ ಅಂಗವಾಗಿ ದೊಡ್ಡನಾಗಪ್ಪ ಹಾಗೂ ಸಣ್ಣನಾಗಪ್ಪ ಸ್ಮರಣಾರ್ಥವಾಗಿ ಉಚಿತ ಸಾಮೂಹಿಕ ವಿವಾಹ ನಡೆಸಲಾಗುತ್ತಿತ್ತು. ಈ ಬಾರಿ ಅದನ್ನು ಹುಣಸಿಕಟ್ಟಿ ರಸ್ತೆಯಲ್ಲಿರುವ ಹೊಸದಾಗಿ ನಿಮಿರ್ಸಿರುವ ಜೆಸಿ ವಾಣಿ ಅರಮನೆ ಕಲ್ಯಾಣ ಮಂಟಪದಲ್ಲಿ ಮಾಡಲಾಗುವುದು.

ಡಿ. 22ರಂದು ಸಂಜೆ 5ಗಂಟೆಗೆ ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಿಂದ 15 ವಧು-&ವರರನ್ನು ಪ್ರತ್ಯೇಕ ಸಾರೋಟದಲ್ಲಿ ಭಾಜಾ ಭಜಂತ್ರಿ ಹಾಗೂ ಡಿಜೆಯೊಂದಿಗೆ ಮೆರವಣಿಗೆಗೆ ಮಾಡಲಾಗುವುದು. ಸ್ಥಳಿಯ ಶಾಸಕರು ಮೆರವಣಿಗೆಗೆ ಚಾಲನೆ ನೀಡುವರು. ಅಲ್ಲಿಂದ ಹೊರಡುವ ಮೆರವಣಿಗೆಯು ಹಳೇ ಪಿ.ಬಿ. ರಸ್ತೆ, ಕಾಕಿಗಲ್ಲಿ, ಕುರುಬಗೇರಿ ಕ್ರಾಸ್​, ದುರ್ಗಾ ಸರ್ಕಲ್​, ಎಂ.ಜಿ. ರಸ್ತೆ, ಚಕ್ಕಿಮಿಕ್ಕಿ ದುರ್ಗಾದೇವಿ ಸರ್ಕಲ್​, ಪೋಸ್ಟ್​ ಸರ್ಕಲ್​, ಮೇಡ್ಲೇರಿ ರಸ್ತೆ ಮಾರ್ಗವಾಗಿ ಜೆಸಿ ವಾಣಿ ಅರಮನೆ ತಲುಪುವುದು. ರಾತ್ರಿ ಎಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ.

ಡಿ. 23ರಂದು ಬೆಳಗ್ಗೆ 11ಗಂಟೆಗೆ ಸಾಮೂಹಿಕ ವಿವಾಹ ಮಹೋತ್ಸವ, ಧರ್ಮಸಭೆ ಹಾಗೂ ಜನಸೇವಾ ಸದಸ್ಯರೊಬ್ಬರಿಗೆ ಉಚಿತ ನಿವೇಶನ ವಿತರಣೆ ಕಾರ್ಯಕ್ರಮ ನಡೆಯಲಿದೆ. ನಗರದ ಶನೇಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯರು ಹಾಗೂ ಲಿಂಗದಹಳ್ಳಿ ರಂಭಾಪುರಿ ಶಾಖಾ ಹಿರೇಮಠದ ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು ಎಂದರು.

ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ಸಾಲಗೇರಿ ಮಾತನಾಡಿ, ವಿವಾಹ ಮಹೋತ್ಸವ ನಂತರ ಸಂಜೆ 7ಗಂಟೆಗೆ ಯರೇಕುಪ್ಪಿ ರಸ್ತೆಯ ಶ್ರೀ ನೀಲಕಂಠೇಶ್ವರ ಸ್ವಾಮಿಯ ಕಾತಿರ್ಕೋತ್ಸವ ಜರುಗಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಸಂಸ್ಥೆಯ ಕಾರ್ಯದಶಿರ್ ರೂಪಾ ಕಾಕಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಖಜಾಂಚಿ ಹನುಮಂತಪ್ಪ ಕಾಕಿ, ಶಿವಾನಂದ ಬಗಾದಿ, ಕೆ.ಸಿ. ನಾಗರಜ್ಜಿ, ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net