

ರಾಣೆಬೆನ್ನೂರ: ಮನುಷ್ಯ ಬದುಕಿನ ನಂತರ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಶನೈಶ್ಚರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಹುಣಸಿಕಟ್ಟಿ ರಸ್ತೆಯಲ್ಲಿ ಸೋಮವಾರ ಲೋಕಾರ್ಪಣೆಗೊಂಡ ಜೇಸಿವಾಣಿ ಅರಮನೆ ಹಾಗೂ ಕಾಕಿ ಜನಸೇವಾ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಾಮೂಹಿಕ ಮದುವೆ ಭಾಗ್ಯವಂತರದು ಹೊರತು ಬಡವರದಲ್ಲ. ಅರಮನೆ ಮಾದರಿಯಲ್ಲಿ ನಿಮಿರ್ಸಿದ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಂಡವರದ್ದು ನಿಜಕ್ಕೂ ಅದೃಷ್ಟವಾಗಿದೆ. ನವ ದಂಪತಿಗಳು ಸಂಸ್ಕಾರದಲ್ಲಿ ರಾಜ ರಾಣಿ ಆಗಬೇಕು. ನವ ದಂಪತಿಗಳು ಆದರ್ಶವಾಗಿ ಬಾಳಿದಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದರು.
ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಸ್ವಾಮೀಜಿ ಮಾತನಾಡಿ, ನವ ದಂಪತಿಗಳ ಬದುಕು ಉಜ್ವಲವಾಗಲಿ. ಕಾಕಿ ಮನೆತನದ ಸಮಾಜಮುಖಿ ಕಾರ್ಯ ಆದರ್ಶಪ್ರಾಯವಾಗಿದೆ ಎಂದರು.
ಕಾಕಿ ಜನ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಅಧ್ಯಕ್ಷತೆ ವಹಿಸಿದ್ದರು. ಸಾಮೂಹಿಕ ವಿವಾಹದಲ್ಲಿ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಂಸ್ಥೆಯ ಕಾರ್ಯದಶಿರ್ ರೂಪಾ ಕಾಕಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಖಜಾಂಚಿ ಹನುಮಂತಪ್ಪ ಕಾಕಿ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ವರ್ತಕ ಎಂ.ಎಸ್. ಅರಕೇರಿ, ಸಣ್ಣಹನುಮಂತಪ್ಪ ಕಾಕಿ, ಲಕ್ಷ$್ಮಣ ಕನಕಿ, ವೆಂಕಟೇಶ ಕಾಕಿ, ಪ್ರಕಾಶ ಗಚ್ಚಿನಮಠ, ಶಿವಾನಂದ ಬಗಾದಿ, ಪ್ರಭುಲಿಂಗ ಹಲಗೇರಿ, ವೆಂಕಟೇಶ ಸಾಲಗೇರಿ, ಶಿವಶಂಕರ ಕೆ., ಗುಡದಯ್ಯ ಹಲಗೇರಿ, ನಿತ್ಯಾನಂದ ಕುಂದಪುರ, ಕೆ.ಸಿ. ನಾಗರಜ್ಜಿ, ಶಿವಾನಂದ ಬಗಾದಿ, ಜಟ್ಟೆಪ್ಪ ಕರೇಗೌಡ್ರ, ಲಕ್ಷಿ$್ಮ ಕಾಕಿ ಮತ್ತಿತರರು ಇದ್ದರು.