ಬಲವಂತದ ಚುಂಬನದ ದೃಶ್ಯಕ್ಕೆ ನಟಿ ನೋ!..'ಕೈಸೆ ಹೋ ಜಾಲಾ ಪ್ಯಾರ್' ಶೂಟಿಂಗ್ ವೇಳೆ ನಡೆದ ಕಿಸ್ಸಿಂಗ್ ಸೀನ್ ಕಥೆ ಬಿಚ್ಚಿಟ್ಟ ಕಾಜಲ್ | Kajal Raghwani

Kajal Raghwani | ಕೈಸೆ ಹೋ ಜಾಲಾ ಪ್ಯಾರ್' ಶೂಟಿಂಗ್ ವೇಳೆ ನಡೆದ ಕಿಸ್ಸಿಂಗ್ ಸೀನ್ ಕಥೆ ಬಿಚ್ಚಿಟ್ಟ ಕಾಜಲ್
Kajal Raghwani | ಕೈಸೆ ಹೋ ಜಾಲಾ ಪ್ಯಾರ್' ಶೂಟಿಂಗ್ ವೇಳೆ ನಡೆದ ಕಿಸ್ಸಿಂಗ್ ಸೀನ್ ಕಥೆ ಬಿಚ್ಚಿಟ್ಟ ಕಾಜಲ್
Published on

ಖ್ಯಾತ ನಟಿ ಕಾಜಲ್ ರಾಘವಾನಿ ಬೋಜ್‌ಪುರಿ ಸೂಪರ್‌ಸ್ಟಾರ್ ಪವನ್ ಸಿಂಗ್ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಕೈಸೆ ಹೋ ಜಾಲಾ ಪ್ಯಾರ್ ಸಿನಿಮಾದ ಶೂಟಿಂಗ್ ವೇಳೆ ನಡೆದ ಕಿಸ್ಸಿಂಗ್ ದೃಶ್ಯದ ಘಟನೆಯನ್ನು ನೆನಪಿಸಿಕೊಂಡಿರುವ ಅವರು, ಈ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೋಜ್‌ಪುರಿ ಬವಾಲ್ ಶೋದಲ್ಲಿ ಮಾತನಾಡುತ್ತಾ ಕಾಜಲ್, ಪವನ್ ಸಿಂಗ್ ಸೆಟ್‌ನಲ್ಲಿ ಗೌರವಯುತವಾಗಿ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ. ನಾವು ಕೈಸೆ ಹೋ ಜಾಲಾ ಪ್ಯಾರ್ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾಗ, ಚುಂಬನದ ದೃಶ್ಯವೊಂದನ್ನು ಬಲವಂತವಾಗಿ ಮಾಡಿಸಲಾಯಿತು. ಮೊದಲು ಕಥೆ ಹೇಳಿದಾಗ ಈ ದೃಶ್ಯದ ಬಗ್ಗೆ ಯಾವುದೇ ಚರ್ಚೆಯಾಗಿರಲಿಲ್ಲ. ಹಾಗಾಗಿ ನಾನು ಆ ದೃಶ್ಯಕ್ಕೆ ನಿರಾಕರಿಸಿದೆ.

ಆದರೆ ಹೀರೋ ಸೆಟ್‌ಗೆ ಬಂದು, ನಾನು ಇಲ್ಲೊಂದು ಕಿಸ್ಸಿಂಗ್ ದೃಶ್ಯ ಮಾಡುತ್ತೇನೆ ಎಂದು ನಿರ್ಧರಿಸಿದರೆ, ಸುತ್ತಲಿರುವವರೆಲ್ಲ ಸರಿ ಭೈಯ್ಯಾ, ಸರಿ ಭೈಯ್ಯಾ ಎಂದು ತಲೆಯಾಡಿಸುತ್ತಾರೆ. ಆದರೆ ಆ ನಟಿಗೆ ಇದು ಇಷ್ಟವಿದೆಯೇ ಇಲ್ಲವೇ ಎಂದು ಯಾರೂ ಕೇಳುವುದಿಲ್ಲ. ನಾನು ದೃಶ್ಯ ಮಾಡಲು ನಿರಾಕರಿಸಿದಾಗ ಅವರು ಸೆಟ್ ತೊರೆದು ಹೊರಟುಹೋದರು ಎಂದು ಕಾಜಲ್ ಬಹಿರಂಗಪಡಿಸಿದ್ದಾರೆ.

ಸಮ್ಮತಿ ಮತ್ತು ಗೌರವದ ಕುರಿತು ಕಾಜಲ್ ಮಾತು

ಈ ಘಟನೆಯ ನಂತರ ತಾವಿಬ್ಬರೂ ಒಟ್ಟಿಗೆ ಕೆಲಸ ಮಾಡುವುದನ್ನು ನಿಲ್ಲಿಸಿದೆವು ಎಂದು ಕಾಜಲ್ ತಿಳಿಸಿದ್ದಾರೆ. ಇನ್ಮುಂದೆ ತಮ್ಮೊಂದಿಗೆ ನಟಿಸುವುದಿಲ್ಲ ಎಂದು ಪವನ್ ಸಿಂಗ್ ಹೇಳಿದ್ದಾಗ, ಅವರ ಆ ನಿರ್ಧಾರವನ್ನು ಒಪ್ಪಿಕೊಳ್ಳಲು ತಾವು ಸಿದ್ಧರಾಗಿದ್ದಾಗಿಯೂ ಕಾಜಲ್ ರಾಘವಾನಿ ಸ್ಪಷ್ಟಪಡಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net