ನಯನತಾರಾ ಅಲ್ಲ ಕಾಜಲ್ ಅಗರ್ವಾಲ್ : ತೆಲುಗು ನಟ ಬಾಲಯ್ಯನ 111ನೇ ಚಿತ್ರಕ್ಕೆ ನಾಯಕಿಯಾದ ‘ಮಗಧೀರ’ ನಟಿ

ಕಾಜಲ್ ಅಗರ್ವಾಲ್​
ಕಾಜಲ್ ಅಗರ್ವಾಲ್​
Published on

ಪ್ರಮುಖ ಮುಖ್ಯಾಂಶಗಳು

  • ಬಾಲಯ್ಯ ಚಿತ್ರಕ್ಕೆ ನಾಯಕಿಯಾದ ಕಾಜಲ್
  • ನಯನ ತಾರಾ ಬದಲಿ ಮಗಧೀರ ನಟಿ ಆಯ್ಕೆ
  • ಶೀಘ್ರದಲ್ಲಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿರುವ ಬಹುಭಾಷಾ ತಾರೆ
ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ 111ನೇ ಚಿತ್ರ ಈಗಾಗಲೇ ೋಷಣೆಯಾಗಿದ್ದು, ‘ಜಾಟ್’ ಖ್ಯಾತಿಯ ಗೋಪಿಚಂದ್ ಮಲಿನೇನಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಮಾಸ್-ಆ್ಯಕ್ಷನ್ ಜಾನರ್ ಸಿನಿಮಾ ಇದಾಗಿರಲಿದ್ದು, ಈಗಾಗಲೇ ಸಿನಿಮಾ ಸೆಟ್ಟೇರಿದೆ. ಬಾಲಕೃಷ್ಣಗೆ ಇಲ್ಲಿ ಯಾರು ಜೋಡಿಯಾಗಲಿದ್ದಾರೆ ಎಂಬ ಕುತೂಹಲ ಟಾಲಿವುಡ್‌ನಲ್ಲಿತ್ತು. ಮೊದಲಿಗೆ ಚಿತ್ರತಂಡವು ನಾಯಕಿಯಾಗಿ ನಯನತಾರಾರನ್ನು ಆಯ್ಕೆ ಮಾಡಿತ್ತು. ಸದ್ಯ ನಟಿಯ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸಲ್ಮಾನ್ ಖಾನ್ ಚಿತ್ರಕ್ಕೂ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದು, ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗ, ಇದೇ ವರ್ಷಕ್ಕೆ ಬಾಲಯ್ಯರ 111ನೇ ಚಿತ್ರ ತೆರೆಗೆ ತರಲು ಪ್ರಯತ್ನಗಳು ನಡೆದಿವೆ. ನಯನತಾರಾ ಡೇಟ್ ಸಮಸ್ಯೆಯಿಂದ ಚಿತ್ರಕ್ಕೆ ಹಿನ್ನಡೆಯಾಗಬಾರದೆಂದು ಚಿತ್ರತಂಡವು ಮತ್ತೊಬ್ಬ ಖ್ಯಾತ ನಟಿಯತ್ತ ಮುಖಮಾಡಿದೆ. ‘ಮಗಧೀರ’, ‘ಡಾರ್ಲಿಂಗ್’, ‘ಟೆಂಪರ್’ ಸೇರಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ಕಾಜಲ್ ಅಗರ್ವಾಲ್, ಬಾಲಕೃಷ್ಣ ಅಭಿನಯದ 111ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 2020ರಲ್ಲಿ ಗೌತಮ್ ಜತೆ ಕಾಜಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟದರು. ಮದುವೆ ಬಳಿಕವೂ ಟಾಲಿವುಡ್ ಸೇರಿ ಪರಭಾಷೆಯಲ್ಲಿ ಅವರು ಬಿಜಿಯಾಗಿದ್ದಾರೆ. ಎರಡು-ಮೂರು ಸಿನಿಮಾಗಳು ಕೈಯಲ್ಲಿರುವಾಗಲೇ ಕಾಜಲ್, ಮತ್ತೊಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಭಗವಂತ ಕೇಸರಿ’ ಬಳಿಕ ಕಾಜಲ್, ಎರಡನೇ ಬಾರಿಗೆ ಬಾಲಕೃಷ್ಣ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಕಾಜಲ್ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ‘ಭಗವಂತ ಕೇಸರಿ’ಯಲ್ಲಿ ವಿಶೇಷ ಪಾತ್ರದಲ್ಲಿದ್ದ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿರುವುದು ವಿಶೇಷ. ಇನ್ನು ಉಳಿದಂತೆ ಕಾಜಲ್, ಹಿಂದಿಯ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸರಣಿಯಲ್ಲಿ ಅಭಿನಯಿಸುತ್ತಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net