ಗೌತಮ್​ ಜತೆಗೆ ಸಪ್ತಪದಿ ತುಳಿದ ಕಾಜಲ್​ ಅಗರ್​ವಾಲ್​ ...

Kajal Wedding - Final
Published on

ಮುಂಬೈ: ಪ್ಯಾನ್​ ಇಂಡಿಯಾ ಆಗಿ ಗುರುತಿಸಿಕೊಂಡಿರುವ ಕಾಜಲ್​ ಅಗರ್​ವಾಲ್​, ಇಂದು ಮುಂಬೈನ ತಾಜ್​ ಹೋಟೆಲ್​ನಲ್ಲಿ ಗೌತಮ್​ ಕಿಚ್ಲು ಜತೆಗೆ ಮದುವೆಯಾಗಿದ್ದಾರೆ.

ಮುಂಬೈನ ಉದ್ಯಮಿಯೊಂದಿಗೆ ಕಾಜಲ್​ ಅವರ ಮದುವೆ ಫಿಕ್ಸ್​ ಆಗಿದ್ದು, ಇಬ್ಬರೂ ಬಹಳ ಬೇಗ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಕಳೆದ ತಿಂಗಳು ಕೇಳಿ ಬಂದಿತ್ತು. ಆದರೆ, ಕಾಜಲ್​ ಈ ವಿಷಯವಾಗಿ ಎಲ್ಲೂ ಮಾತನಾಡಿರಲಿಲ್ಲ.

ಕೆಲವು ದಿನಗಳ ಹಿಂದಷ್ಟೇ, ಕಾಜಲ್​ ತಮ್ಮ ಮದುವೆಯ ಬಗ್ಗೆ ಮೌನ ಮುರಿದು, ಗೌತಮ್​ ಅವರನ್ನು ಅಕ್ಟೋಬರ್​ 30ರಂದು ಮದುವೆಯಾಗುವುದಾಗಿ ಹೇಳಿದ್ದರು. ಅದರಂತೆ ಇಂದು ಕಾಜಲ್​ ಮತ್ತು ಗೌತಮ್​ ಅವರ ಮದುವೆ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಆಪ್ತವಾಗಿ ಮುಗಿದಿದೆ.

'ಮಗಧೀರ', 'ಸಿಂಗಂ', 'ಸ್ಪೆಷಲ್​ 26' ಸೇರಿದಂತೆ ಕೆಲವು ಸೂಪರ್​ ಹಿಟ್​ ಚಿತ್ರಗಳಲ್ಲಿ ನಟಿಸಿರುವ ಕಾಜಲ್​, ಇದೀಗ 'ಇಂಡಿಯನ್​ 2', 'ಮುಂಬೈ ಸಾಗಾ', 'ಮೋಸಗಾಳ್ಳು' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net