

ರಾಣೆಬೆನ್ನೂರ: ದಾರ್ಶನಿಕರು, ಮಹನೀಯರು ಒಂದು ವರ್ಗಕ್ಕೆ ಸೀಮಿತರಾಗಿಲ್ಲ ಅವರೆಲ್ಲರೂ ಮನುಕುಲದ ಉದ್ದಾರಕ್ಕೆ ಶ್ರಮಿಸಿದವರು ಎಂದು ತಹಸೀಲ್ದಾರ್ ಆರ್.ಎಚ್. ಭಾಗವಾನ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಬಲಿಜ ಸಮಾಜ ಹಾಗೂ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸದ್ಗುರು ಶ್ರೀಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಅವರ 299ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕ ಚಿಂತಕ, ಹರಿಕಾರರಾಗಿದ್ದ ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅನಿಷ್ಠ ಪದ್ದತಿಗಳ ವಿರುದ್ಧ ಧ್ವನಿ ಎತ್ತಿದವರಾಗಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಬೇಕು ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಮಲ್ಲೇಶ ಕುಂಕುಮಗಾರ, ಉಪಾಧ್ಯಕ್ಷ ರವಿ ಕಿರಿಗೇರಿ, ಮುಖಂಡರಾದ ಕೆ.ಜಿ. ದಿವಾಕರಮೂತಿರ್, ಮಂಜುನಾಥ ಕುಂಕುಮಗಾರ, ಹರೀಶ ಚವ್ಹಾಣ, ಮಂಜುನಾಥ ಗುತ್ತಲ, ದೇವರಾಜ ಕಿರಿಗೇರಿ, ರಮೇಶ ಗುತ್ತಲ ಮತ್ತಿತರರಿದ್ದರು.