

ಕೋಲಾರ: ಕೈವಾರ ತಾತಯ್ಯನವರು ಸಮಾಜ ಸುಧಾರಕರಾಗಿದ್ದು, ಅವರು ತೋರಿದ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಿದಾಗ ಮಾತ್ರ ಭವಿಷ್ಯ ಭಾರತ ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಯತೀಂದ್ರ ಶ್ರೀಯೋಗಿ ನಾರೇಯಣ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ, ತಾತಯ್ಯ ರಚಿಸಿರುವ ಕಾಲಜ್ಞಾನದಲ್ಲಿ ಜಗತ್ತು ಅರಿಯಬೇಕಾದ ಅನೇಕ ಅಂಶಗಳಿವೆ. ತತ್ವ, ತೋರಿದ ಮಾರ್ಗದರ್ಶನ ಪಾಲಿಸಿದರೆ ಎಲ್ಲೆಡೆ ಶಾಂತಿ ನೆಲೆಸುವುದರಲ್ಲಿ ಸಂಶಯವಿಲ್ಲ ಎಂದರು.
ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತಾತಯ್ಯನವರು ಜನ್ಮತಾಳಿದ್ದು ನಮ್ಮೆಲ್ಲರ ಪುಣ್ಯ. ಅಂತಹ ಮಹಾನುಭಾವರ ಜಯಂತ್ಯುತ್ಸವವನ್ನು ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಅದ್ದೂರಿಯಾಗಿ ಆಚರಿಸುವಂತಾಗಬೇಕು ಎಂದು ತಿಳಿಸಿದರು.
ಅಂತರಗಂಗೆ ಬೆಟ್ಟದ ಮೇಲೆ ಬಲಿಜ ಸಮುದಾಯದ ಭವನಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಸಮುದಾಯದ ಏಳಿಗೆಗೆ ಅಗತ್ಯ ಸಹಕಾರ ನೀಡಲಾಗುವುದು. ನಗರದ ಸುತ್ತಮುತ್ತಲು ಯಾವುದೇ ಸರ್ಕಾರಿ ಸ್ಥಳ ಇಲ್ಲದೆ ಇರುವುದರಿಂದ ಬಲಿಜ ಸಮುದಾಯದ ಭವನ ನಿಮಾರ್ಣ ಮಾಡಲು ಅಂತರಗಂಗೆ ಬೆಟ್ಟದಲ್ಲಿ ಸರ್ಕಾರದ ಜಾಗ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಶಾಸಕರಾದ ಎಂ.ಎಲ್. ಅನಿಲ್ಕುಮಾರ್ ಮಾತನಾಡಿ, ನನ್ನ ರಾಜಕೀಯ ಜೀವನವನ್ನು ಕೈವಾರ ಯೋಗಿನಾರಾಯಣ ಯತೀಂದ್ರ ಸಮಿತಿಯ ಅಧ್ಯಕ್ಷ ಆದಾಗಿನಿಂದ ಪ್ರಾರಂಭವಾಯಿತು. ಯಾವುದೇ ಜಾತಿ ಬೇಧವಿಲ್ಲದೆ ಬದುಕಬೇಕು ಎಂಬುದನ್ನು ತಾತಯ್ಯ ಅವರ ಕೀರ್ತನೆಗಳಲ್ಲಿ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಹೆಣ್ಣು ಒಂದು ಕುಟುಂಬಕ್ಕೆ ಸೀಮಿತವಾಗಿದ್ದ ಸಂದರ್ಭದಲ್ಲಿ ಜ್ಯೋತಿ ಬಾ ುಲೆ ಅವರು ಸಹ ಇದೆ ಸಮುದಾಯಕ್ಕೆ ಸೇರಿದವರು. ಆದರೂ ಸಹ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗದೆ ಮಹಿಳೆಯರ ಶಿಕ್ಷಣಕ್ಕೆ ಹೋರಾಡಿದವರಾಗಿದ್ದಾರೆ. ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರ 2ಎ ಮೀಸಲಾತಿಯನ್ನು ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸುವಂತೆ ಸರ್ಕಾರದಿಂದ ಪ್ರಯತ್ನಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ನಂತರ ಕೈವಾರ ನಾದ ವಿದ್ವಾನ್ ಮತ್ತು ತಂಡದವರಿಂದ ತಾತಯ್ಯನವರ ತತ್ವಪದಗಾಯನ ನಡೆಯಿತು.
ಅದ್ದೂರಿ ಮೆರವಣಿಗೆ
ನಗರ ಮತ್ತು ಗ್ರಾಮಾಂತರ ಪ್ರದೇಶದಿಂದ ಬಂದಿದ್ದ 15ಕ್ಕೂ ಹೆಚ್ಚು ಸ್ಥಬ್ದಚಿತ್ರಗಳು ಮತ್ತು ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆಗೆ ಆದ್ದೂರಿಯಾಗಿ ಚಾಲನೆ ನೀಡಲಾಯಿತು. ಶ್ರೀ ವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿಯಿಂದ ಬಂಗಾರಪೇಟೆ ರಸ್ತೆ, ಅಂಬೇಡ್ಕರ್ ವೃತ್ತ, ಡೂಂಲೈಟ್ ವೃತ್ತದ ಮೂಲಕ ಸಾಗಿ ರಂಗಮಂದಿರದ ಸಮೀಪ ಅಂತ್ಯಗೊಂಡಿತು.
ನಗರಸಭೆ ಅಧ್ಯಕ್ಷೆ ಲಕ್ಷಿ$್ಮದೇವಮ್ಮ, ಅಪರ ಜಿಲ್ಲಾಧಿಕಾರಿ ಮಂಗಳಾ, ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷಿ$್ಮ, ವಿದ್ವಾನ್ ಬಾಲಕೃಷ್ಣ ಭಾಗವತರ್, ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲ್, ಬಲಿಜ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ರವೀಂದ್ರಕುಮಾರ್, ಮುಖಂಡರಾದ ಎಂ.ವಿ.ರಘು, ಕೆ.ವಿ.ಸುರೇಶ್ ಕುಮಾರ್, ವೆಂಕಟಸ್ವಾಮಿ, ಎಸ್.ಎಸ್.ಶ್ರೀಧರ್ ಇದ್ದರು.