ಕಾಗೋಡು ರೈತರ ಪರ ದನಿಯೆತ್ತಿದ ನಾಯಕ

anp (3)
ಆನಂದಪುರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಾಗರಿಕ ಸನ್ಮಾನ ಮಾಡಲಾಯಿತು. ಸಂತೋಷ್ ಲಾಡ್, ಗೋಪಾಲಕೃಷ್ಣ ಬೇಳೂರು, ಬಿ.ಆರ್.ಜಯಂತ್, ಅನಿಲ್‌ಕುಮಾರ್, ಟಾಕಪ್ಪ ಇತರರಿದ್ದರು.
Published on

ಆನಂದಪುರ: ಗ್ರಾಮೀಣ ರೈತರು, ಬಡವರು ಮತ್ತು ಕಾರ್ಮಿಕರ ಪರ ನಿರಂತರ ಧ್ವನಿ ಎತ್ತಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ ಕಾಗೋಡು ತಿಮ್ಮಪ್ಪ ಧೀಮಂತ ನಾಯಕ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಪಟ್ಟಣದ ಶ್ರೀ ಮಾರಿಕಾಂಬಾ ದೇವಾಲಯದ ಎದುರು ಭಾನುವಾರ ಕಾಗೋಡು ತಿಮ್ಮಪ್ಪ ಅವರಿಗೆ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಗೋಡು ತಮ್ಮ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಓಡಾಡಿ ಜನರ ಸಮಸ್ಯೆ ಅರ್ಥ ಮಾಡಿಕೊಂಡವರು. ಶಾಸಕ, ಸಚಿವ, ವಿಧಾನಸಭಾ ಅಧ್ಯಕ್ಷರಾಗಿ ಅವಕಾಶ ಸಿಕ್ಕಿದಾಗಲೆಲ್ಲ ರೈತರ ಪರ ಧ್ವನಿ ಎತ್ತಿದ ಶ್ರೇಷ್ಠ ನಾಯಕ. ಯುವ ಪೀಳಿಗೆ ಕಾಗೋಡು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಸಾಮಾಜಿಕ ನ್ಯಾಯ ತತ್ವದಡಿ ಹೋರಾಡುತ್ತ ಬಂದ ಕಾಗೋಡು ತಿಮ್ಮಪ್ಪ ಸಾಗರ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ದೂರದೃಷ್ಟಿಯ ಕಾರ್ಯ ಸಾಧನೆ ಮತ್ತು ರೈತರು, ಬಡವರ ಪರವಾದ ಕಾಳಜಿಗಳಿಂದ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಕಾಗೋಡು ಅವರ ಛಲದಿಂದ ಉಳುವವನೇ ನೆಲದೊಡೆಯ ಎಂಬ ಕಾನೂನು ಸಮರ್ಪಕವಾಗಿ ಜಾರಿಯಾಯಿತು ಎಂದು ತಿಳಿಸಿದರು.

ಸಾಗರ ತಾಪಂ ಮಾಜಿ ಸದಸ್ಯ ಸೋಮಶೇಖರ ಲಾವಿಗೆರೆ ಮಾತನಾಡಿ, ಕಾಗೋಡು ಅವರ ಜನಪರವಾದ ಕಾಳಜಿ ಡಾಕ್ಟರೇಟ್ ಗೌರವಕ್ಕೆ ಕಾರಣವಾಗಿದೆ ಎಂದರು. ಪ್ರಮುಖರಾದ ಅನಿಲ್‌ಕುಮಾರ್, ಕಣ್ಣೂರು ಟಾಕಪ್ಪ, ಸುಧೀರ್‌ಕುಮಾರ್, ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್, ಎನ್.ಉಮೇಶ, ರಮಾನಂದ ಸಾಗರ್, ಚೇತನ್‌ರಾಜ್ ಕಣ್ಣೂರು, ಗಜೇಂದ್ರ, ರವಿಕುಮಾರ್, ಎಂ.ಎಲ್.ಈಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net