

ವೇಷತಾಳದ ತಪಸು, ಕಠಿನತರ ತಪಸು||
ಲೇಸಿನಿಂದದು ಸಾಗೆ ಬೇಕು ಶಮ ದಮ ಸಮತೆ|
ಅಸಿಧಾರವ್ರತವೊ-ಮಂಕುತಿಮ್ಮ||612||
ಕಾವಿ ಬಟ್ಟೆಯನ್ನು ತೊಟ್ಟವರದ್ದು ಮಾತ್ರವೇ ತಪಸ್ಸೇನು? ಲೋಕಸಂಸಾರವನ್ನು ಸಂಭಾಳಿಸುತ್ತಾ ಬಾಳುವುದು ಕೂಡಾ ತಪಸ್ಸಲ್ಲವೇ? ತಾಪಸಿಯ ವೇಷ ಧರಿಸದಿದ್ದರೂ, ಗೃಹಲೋಕವನ್ನು ನಿರ್ವಹಿಸುವುದು ಕೂಡಾ ಒಂದು ತಪಸ್ಸು. ಇದು ಎಲ್ಲದಕ್ಕಿಂತಲೂ ಕಠಿಣತರವಾದ ತಪಸ್ಸಾಗಿದೆ. ಕತ್ತಿಯ ಅಲುಗಿನ ಮೇಲೆ ನಡೆವ ವ್ರತದ ಹಾಗೆಯೇ ಇದು. ಈ ತಪವು ಬಹಳ ಎಚ್ಚರದಿಂದ ಸಾಗಬೇಕಿದ್ದರೆ ವ್ಯಕ್ತಿಯಲ್ಲಿ ಶಮ ದಮ ಮತ್ತು ಸಮತೆಯು ಬೇಕು ಎನ್ನುತ್ತದೆ ಈ ಕಗ್ಗ.
ಲೋಕ ಸಂಸಾರವನ್ನು ತೊರೆದು, ಕಾಷಾಯ ವಸವನ್ನುಟ್ಟು, ನೇಮ-ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸುತ್ತಾ, ಕಠಿಣ ವ್ರತ-ಪೂಜೆ, ಧ್ಯಾನಗಳನ್ನು ಮಾಡುವುದು ಸಂನ್ಯಾಸಿಗಳ ಜೀವನದ ರೀತಿ. ಬಾಹ್ಯ ಆಕರ್ಷಣೆಗಳಿಗೆ ಬಲಿಯಾಗದಂತೆ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು. ಸಂಯಮಿಗಳಾಗಬೇಕು. ಹಾಗಾಗಿ ಸಂನ್ಯಾಸಿಗಳ ಜೀವನವೆಂದರೆ ಒಂದು ಕಠಿಣ ತಪಸ್ಸು. ಆದರೆ ಸಂನ್ಯಾಸಿಗಳು ತಮ್ಮ ಸಾಧನೆಗೆ ಅನುಕೂಲಕರವಾದ ಪರಿಸರದಲ್ಲಿ ತಪೋನಿರತರಾಗುತ್ತಾರೆ. ಸಂಸಾರದ ತಾಪತ್ರಯಗಳಾಗಲಿ, ಜಗದ ಚಿಂತೆಯಾಗಲಿ ಅವರನ್ನು ಕಾಡುವುದಿಲ್ಲ. ತದೇಕಚಿತ್ತದಿಂದ ಭಗವಂತನನ್ನು ಧ್ಯಾನಿ ಸುವುದಕ್ಕೆ, ಆರಾಧಿಸುವುದಕ್ಕೆ ಯಾವ ತೊಡಕೂ ಇರುವುದಿಲ್ಲ. ಆದರೆ ಗೃಹಸ್ಥನಿಗೆ ತನ್ನ ಗೃಹಸ್ಥ ಧರ್ಮವನ್ನು ಅನುಸರಿಸುತ್ತಾ ಜೀವನ್ಮುಕ್ತನಾಗುವುದು ಸುಲಭದ ಮಾತಲ್ಲ.
ಏಕೆಂದರೆ ಗೃಹಸ್ಥನು ಲೋಕ ಸಂಸಾರದೊಳಗೆ ಬೆರೆತು ಬಾಳುತ್ತಾನೆ. ಹಲವು ಬಾಂಧವ್ಯಗಳು ಅವನನ್ನು ಸುತ್ತಿಕೊಂಡಿರುತ್ತವೆ. ಸಂಸಾರ ನಿರ್ವಹಣೆಗಾಗಿ ಉದ್ಯೋಗ, ವ್ಯವಹಾರ, ಸಾಮಾಜಿಕ ಒಡನಾಟಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ಕರ್ತವ್ಯಗಳನ್ನು ಮಾಡು ವುದು ಗೃಹಸ್ಥನಿಗೆ ಅನಿವಾರ್ಯ, ಆತನು ಕರ್ಮತ್ಯಾಗವನ್ನು ಮಾಡು ವಂತಿಲ್ಲ. ಹಾಗಾಗಿ ಸುಖ&ದುಃಖ, ಲಾಭ&ನಷ್ಟಗಳು ಇರುಳು& ಹಗಲಿ ನಂತೆ ಅತನ ಬಾಳಿನಲ್ಲಿ ಮತ್ತೆಮತ್ತೆ ಕಾಣಿಸಿಕೊಳ್ಳುತ್ತವೆ. ಶೈಶವದಿಂದ ತೊಡಗಿ ವೃದ್ಧಾಪ್ಯದವರೆಗೂ ಆಕಸ್ಮಿಕಗಳನ್ನು ಎದುರಿಸುತ್ತಾನೆ.
ಪ್ರಕೃತಿಯು ಕೂಡಾ ವಿವಿಧ ಬಗೆಯ ಮೋಹ ಆಕರ್ಷಣೆಗಳನ್ನು ಹರವಿ ವ್ಯಕ್ತಿಯ ಮನಸ್ಸನ್ನು ಕೆರಳಿಸುತ್ತದೆ. ಜೊತೆಗೆ ವಿಧಿಯು ಪೂರ್ವಾಜಿರ್ತ ಕರ್ಮಶೇಷಗಳ ಲೆಕ್ಕಾಚಾರದಲ್ಲಿ ಸಿಲುಕಿಸುತ್ತದೆ. ಅಷ್ಟೇಅಲ್ಲದೆ ಮತಿಯನ್ನು ಮಂಕಾಗಿಸುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಹಗೆಗಳನ್ನು ಎದುರಿಸಬೇಕಾಗುತ್ತದೆ. ಇವೆಲ್ಲದರಿಂದಾಗಿ ಸಂಸಾರದೊಳಗೆ ಕ್ಲೇಶ&ನಾಶಗಳು ಸಂಭವಿಸುತ್ತವೆ, ರಾಗ&ದ್ವೇಷಕ್ಕೆ ಒಳಗಾಗುತ್ತಾನೆ. ಬಾಹ್ಯ ಸಂದರ್ಭಗಳಿಂದ ಪ್ರಚೋದಿತನಾಗಿ ಪದೇಪದೇ ಭಾವೋದ್ರಿಕ್ತನಾಗುತ್ತಾನೆ. ಭ್ರಮಿತನಂತೆ ವತಿರ್ಸುತ್ತಾನೆ. ಸಂತೆಯೊಳಗಿದ್ದುಕೊಂಡು ಮೌನಿಯಾಗುಳಿವುದು ಕಷ್ಟ. ಮನಸ್ಸನ್ನು ಕೆರಳಿಸುವ, ಬುದ್ಧಿಯನ್ನು ಕೆಡಿಸುವ ಹಲವು ವಿಚಾರಗಳ ನಡುವೆಯೇ ಗೃಹಸ್ಥನು ಬಾಳುತ್ತಿರುವುದರಿಂದ ಆತ್ಮೋನ್ನತಿಯೆಡೆಗಿನ ಪಯಣವು ಆತನಿಗೆ ಸರಳವಲ್ಲ. ಹಾಗೆಂದು ಗೃಹಸ್ಥ ಧರ್ಮವೇ ಕೆಟ್ಟದ್ದು, ಜೀವೋತ್ಕರ್ಷವನ್ನು ಪಡೆಯುವುದಕ್ಕೆ ತೊಡಕು ಎಂದು ಭಾವಿಸಬೇಕಾಗಿಲ್ಲ. ಮನುಷ್ಯನಲ್ಲಿ ಪ್ರಕೃತಿದತ್ತವಾಗಿಯೇ ರಜೋ, ತಮೋ, ಸಾತ್ತಿ$್ವಕಗಳೆಂಬ ತ್ರಿಗುಣಗಳು ಅಸಮವಾಗಿ ಮಿಳಿತವಾಗಿರುತ್ತವೆ.
ರಾಜಸವಾದ ಮತ್ತು ತಾಮಸವಾದ ಪ್ರವೃತ್ತಿಗಳನ್ನು ನಿವಾರಿಸಿಕೊಂಡು ಸತ್ವಾತಿಶಯನಾಗಲು ವ್ಯಕ್ತಿಯು ಪ್ರಯತ್ನಿಸಬೇಕು. ಇದಕ್ಕೆ ಜೀವನರಂಗವೆ ಪ್ರಯೋಗಶಾಲೆ. ಜೀವಿತದ ಪ್ರತಿಣವು ಆತನಿಗೆ ಜೀವಸಂಸ್ಕಾರವನ್ನು ನೀಡುತ್ತದೆ. ಅನುಭವಗಳಿಂದ ಪಾಠವನ್ನು ಕಲಿಯುತ್ತಾ, ಮತ್ತೆಮತ್ತೆ ಸ್ವವಿಶ್ಲೇಷಣೆಗೆ ಒಳಗಾಗುತ್ತಾ, ಪರಿಪಕ್ವತೆಯನ್ನು ಹೊಂದುವುದಕ್ಕೆ ಲೋಕಸಂಪರ್ಕವು ಬೇಕು. ಸಂಸಾರವೆಂಬ ಹರಿತವಾದ ಕತ್ತಿಯ ಅಲುಗಿನ ಮೇಲೆ ಗಾಯವಾಗದಂತೆ ನಡೆಯುವ ಕುಶಲತೆಯನ್ನು ಸಿದ್ಧಿಸಿಕೊಳ್ಳುವುದೇ ನಿಜವಾದ ಸಾಧನೆ.
ಇದಕ್ಕೆ ಶಮ,ದಮ ಸಮತೆಗಳನ್ನು ರೂಢಿಸಿಕೊಳ್ಳಬೇಕು. ಶಮವೆಂದರೆ ಅಂತ ರಂಗವು ಕ್ಷೋಭೆಗೆ ಒಳಗಾಗದಂತೆ, ಹುಚ್ಚೆದ್ದು ಕುಣಿಯದಂತೆ ಎಚ್ಚರವಹಿಸುವುದು. ದಮವೆಂದರೆ ಬಾಹ್ಯೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಚಪಲಚಿತ್ತರಾಗದಿರುವುದು. ದ್ವೇಷ ಮೋಹಗಳನ್ನು ಮೀರಿ ಎಲ್ಲರ ಹಿತವನ್ನು ಬಯಸುವುದು ಸಮತೆ. ಜೀವನದಲ್ಲಿ ಪ್ರತಿಕೂಲ ಸಂದರ್ಭಗಳನ್ನು ಎದುರಿಸುತ್ತಾ, ಶಮ ದಮ ಸಮತೆಯನ್ನು ಅನುಸರಿಸುವುದು, ಸ್ಥಿತಪ್ರನಾಗಿರುವುದು ನಿಜಕ್ಕೂ ಕಠಿಣವಾದ ತಪಸ್ಸು. ಶಿಖರಾಗ್ರದಲ್ಲಿರುವ ದೇವಮಂದಿರವನ್ನು ಸಂದಶಿರ್ಸಲು ಕೆಲವರು ತಮ್ಮದೇ ವಾಹನದಲ್ಲಿ ಸಾಗಬಹುದು. ಇನ್ನು ಕೆಲವರು ಕಡಿದಾದ ದಾರಿಯಲ್ಲಿ ಕಷ್ಟಪಡುತ್ತಾ ಕಾಲ್ನಡಿಗೆಯಲ್ಲಿ ಮೇಲೇರ ಬಹುದು. ಇಬ್ಬರ ಉದ್ದೇಶವೂ ದೇವಮಂದಿರವನ್ನು ಸಂದಶಿರ್ ಸುವುದೇ ಆಗಿದ್ದರೂ ಪಡುವ ಶ್ರಮ, ಪಡೆವ ಅನುಭವ, ಸಾಧನೆ&ಸಿದ್ಧಿ ಬೇರೆಬೇರೆಯಾದುದು. ಜೀವನವು ಬಂಧನವೆನ್ನಿಸದೆ, ಬಂಧುರ ವಾಗಬೇಕಿದ್ದರೆ ಜೀವನದಲ್ಲಿ ಸಂಭವಿಸುವುದೆಲ್ಲದಕ್ಕೂ ತಾನು ಸಾ ಯಾಗಿದ್ದೇನೆ ಎಂಬ ಅರಿವು ವ್ಯಕ್ತಿಯಲ್ಲಿ ಜಾಗೃತವಾಗಬೇಕು. ತನ್ನಿಂದ ತಾನು ಸ್ವತಂತ್ರನಾಗುತ್ತಾನೆ. ಇದರಿಂದಾಗಿ ಆತ್ಮೋನ್ನತಿಯೆಡೆಗಿನ ಪ್ರಯಾಣವು ನಿರಾತಂಕವಾಗುತ್ತದೆ.