ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಭಾರತ ಸರ್ಕಾರಕ್ಕೆ ಜೂನ್ 26ರಂದು ಪತ್ರ ಬರೆದು ಕಫೀಲ್ ಖಾನ್, ಶಾರ್ಜೀಲ್ ಇಮಾಮ್ ಪ್ರಕರಣವೂ ಸೇರಿ 11 ಪ್ರಕರಣಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವ ಗಂಭೀರ ಆರೋಪದ ಬಗ್ಗೆ ಗಮನಸೆಳೆದಿತ್ತು. ಮಾನವಹಕ್ಕುಗಳ ಉಲ್ಲಂಘನೆಯಾಗದಂತೆ ಗಮನಿಸಲು ಭಾರತ ಸರ್ಕಾರಕ್ಕೆ ಮನವಿ ಮಾಡಿದ ಈ ಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದ ಕಫೀಲ್ ಖಾನ್, ಸಿಎಎ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದವರನ್ನು ಹತ್ತಿಕ್ಕಲು ನ್ಯಾಷನಲ್ ಸೆಕ್ಯೂರಿಟಿ ಆ್ಯಕ್ಟ್, ಯುಎಪಿಎ ಮುಂತಾದ ಕಾನೂನುಗಳನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಇದು ಈಗಲೂ ಮುಂದುವರಿದಿದೆ ಎಂದು ಪತ್ರದಲ್ಲಿ ದೂರಿದ್ದಾರೆ.