ಧರ್ಮದ ಬೆಳಕಿನಲ್ಲಿ ಬದುಕನ್ನು ಸಾಗಿಸಬೇಕು: ಶ್ರೀ ಕಾಶೀ ಜಗದ್ಗುರು

IMG-20230701-WA0075
Published on

ಗದಗ:
ಪ್ರತಿಯೊಬ್ಬ ಮನುಷ್ಯನು ಧರ್ಮದ ಬೆಳಕಿನಲ್ಲಿ ಬದುಕನ್ನು ಸಾಗಿಸಬೇಕು ಎಂದು ಶ್ರೀ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಗದಗ ನಗರದ ಕೆ. ಎಚ್​. ಪಾಟೀಲ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಆಶೀರ್ವಚನ ವೇದಿಕೆಯಲ್ಲಿ ಜಮಖಂಡಿಯ ನೂತನ ಶಾಸಕ ಶ್ರೀ ಜಗದೀಶ ಗುಡಗುಂಟಿ ಅವರಿಗೆ "ಧರ್ಮ ಪ್ರಕಾಶ" ಎಂಬ ಪ್ರಶಸ್ತಿಯನ್ನು ಅನುಗ್ರಹಿಸಿ ಆಶೀರ್ವಚನ ನೀಡಿ ಮಾತನಾಡಿದ ಜಗದ್ಗುರುಗಳು, ಚರ್ತುವಿಧ ಪುರುಷಾರ್ಥಗಳಲ್ಲಿ ಧರ್ಮವೇ ಪ್ರಧಾನವಾಗಿದೆ. ಧರ್ಮದಿಂದಲೇ ಅರ್ಥ, ಧರ್ಮದಿಂದಲೇ ಕಾಮ, ಮತ್ತು ಧರ್ಮದಿಂದಲೇ ಮೋಕ್ಷವು ಲಭಿಸುವುದು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನ ದೈನಂದಿನ ಬದುಕಿನಲ್ಲಿ ಧರ್ಮವನ್ನು ಅವಶ್ಯವಾಗಿ ಸಂಗ್ರಹಿಸಬೇಕು ಎಂದರು.
ಕಲಿಯುಗದಲ್ಲಿ ದಾನವು ಶ್ರೇಷ್ಠವಾದ ಧರ್ಮ ಆಚರಣೆ ಎಂದು ಕರೆಯಲ್ಪಟ್ಟಿದೆ. ಜಗದೀಶ ಗುಂಡಗುಂಟಿಮಠ ಅವರು ಮೊದಲಿನಿಂದಲೂ ಮಹಾದಾನಿಗಳು .ಪ್ರತಿಯೊಂದು ಪೀಠಗಳಲ್ಲಿ ನಡೆಯುವ ಅನ್ನದಾನಕ್ಕೆ ನಿರಂತರವಾಗಿ ಅವರು ಸೇವೆಯನ್ನು ಸಲ್ಲಿಸುತ್ತ ಬಂದಿದ್ದಾರೆ. ತಮ್ಮ ಪರಿಸರದಲ್ಲಿ ಯಾರೇ ಧಾಮಿರ್ಕ ಸಮಾರಂಭ ಹಮ್ಮಿಕೊಂಡಾಗ ಅಲ್ಲಿ ಅನ್ನದಾನ ಸೇವೆಯನ್ನು ಇವರೇ ಮಾಡುತ್ತಿರುವುದು ಒಂದು ವಿಶೇಷ. ಕಾಶೀ ಪೀಠದಲ್ಲಿ ನಡೆಯುವ ಎಲ್ಲ ಧಾಮಿರ್ಕ ಸಮಾರಂಭಗಳಲ್ಲಿ ಮುಕ್ತ ಹಸ್ತದಿಂದ ದಾನ ಮಾಡಿದ ಜಗದೀಶ ಗುಡುಗುಂಟಿ ಅವರ ಅಲೌಕಿಕ ಧರ್ಮಸೇವೆವನ್ನು ಹಾಗೂ ನೂತನ ಶಾಸಕರಾಗಿ ಬಂದ ನಿಮಿತ್ಯವಾಗಿ ಅವರಿಗೆ "ಧರ್ಮಪ್ರಕಾಶ" ಪ್ರಶಸ್ತಿ ದಯಪಾಲಿಸಲಾಗುತ್ತಿದೆ ಎಂದು ಜಗದ್ಗರುಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net