ಭಾವಪೂರ್ಣವಾದ ಭಕ್ತಿಯಿಂದ ಉತ್ತಮ ಆರೋಗ್ಯ ಪ್ರಾಪ್ತಿ - ಶ್ರೀ ಕಾಶಿ ಜಗದ್ಗುರು

IMG-20230627-WA0010
Published on

ಗದಗ: ಭಾವಪೂರ್ಣವಾಗಿ ಮಾಡುವ ಭಕ್ತಿಯಿಂದ ಕೇವಲ ಪುಣ್ಯವಷ್ಟೇ ಅಲ್ಲ ಉತ್ತಮ ಆರೋಗ್ಯದ ಪ್ರಾಪ್ತಿಯೂ ಸಹ ಆಗುತ್ತದೆ. ಎಂಬ ವಿಚಾರವನ್ನು ಶ್ರೀ ಕಾಶಿ ಜಗದ್ಗುರು ಡಾಕ್ಟರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

ಗದಗ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆದ ಶ್ರೀ ಸಿದ್ಧಾಂತ ಶಿಖಾಮಣಿಯ ಭಾವಾಚಾರ ಸ್ಥಲದ ಬಗ್ಗೆ ತಮ್ಮ ಆಶೀರ್ವಚನವನ್ನು ದಯಪಾಲಿಸುತ್ತಾ ಈ ವಿಚಾರವನ್ನು ತಿಳಿಸಿದರು. ಮನುಷ್ಯನ ದೇಹವು ಅನಂತ ಜೀವ ಕೋಶಗಳಿಂದ ಕೂಡಿಕೊಂಡಿರುತ್ತದೆ ವೈಜ್ಞಾನಿಕ ಸಂಶೋಧನೆಯ ಪ್ರಕಾರ ಮನುಷ್ಯನ ರಕ್ತದಲ್ಲಿ ಒಂದು ಸೆಕೆಂಡಿಗೆ 30 ಲಕ್ಷ ಜೀವಕೋಶಗಳು ಉತ್ಪನ್ನವಾಗುತ್ತವೆ. ಮತ್ತು ಅವು ಮರುಕ್ಷಣದಲ್ಲಿ ಮೃತ್ಯು ಮುಖಿಗಳೂ ಆಗುತ್ತವೆ. ಹೀಗೆ ಈ ಚಯಾಪಚಯಗಳ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಈ ಜೀವಕೋಶಗಳು ಉತ್ಪನ್ನವಾಗುವ ಸಮಯದಲ್ಲಿ ನಮ್ಮ ಮನಸ್ಸು ಶುದ್ದ ಸಾತ್ವಿಕ ಭಾವವನ್ನು ಹೊಂದಿದ್ದರೆ ಆಗ ಹುಟ್ಟುವ ಜೀವಕೋಶಗಳು ಪರಿಪೂರ್ಣ ಶಶಕ್ತವಾಗಿದ್ದು ರೋಗಾಣುವಿನೊಂದಿಗೆ ಹೋರಾಡುವ ಪ್ರಬಲ ಸಾಮರ್ಥ್ಯವನ್ನು ಹೊಂದಿರುತ್ತವೆ .ಹೆಚ್ಚು ಹೆಚ್ಚು ಕಾಲ ನಾವು ಪೂಜೆ ಜಪ ಧ್ಯಾನ ಮತ್ತು ಸಕಾರಾತ್ಮಕ ಮನೋಭಾವನೆಯನ್ನು ಹೊಂದಿದಾಗ ಉತ್ಪನ್ನವಾಗುವ ಜೀವಕೋಶಗಳು ನಿರಂತರ ಸಶಕ್ತವಾಗಿರುವುದರಿಂದ ದೇಹದಲ್ಲಿ ಎಲ್ಲವಿದ ರೋಗಗಳನ್ನು ಸಹಜವಾಗಿ ದೂರವಾಗುವಲ್ಲದೆ, ಹೀಗೆ ಪ್ರತಿದಿನ ಈ ಧಾರ್ಮಿಕ ವಿಧಿ ವಿಧಾನಗಳನ್ನು ಭಾವಪೂರ್ಣವಾಗಿ ಆಚರಿಸುತ್ತ ಹೋದರೆ ಜೀವನದಕ್ಕೂ ನಿರೋಗಿಯಾಗಿ ಬದುಕನ್ನು ಸಾಗಿಸಬಹುದು ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮದಲ್ಲಿ ಹೇಳಿದ ಹಾಗೆ ನಿತ್ಯ ಕರ್ಮಗಳನ್ನು ಇಷ್ಟ ದೇವರ ಪೂಜೆಯನ್ನು ತಮ್ಮ ಇಷ್ಟ ದೇವರ ಮಂತ್ರಜಪ ವನ್ನು ಭಾವಪೂರ್ಣವಾಗಿ ಜಪಿಸಿ ಅದರಿಂದ ಪುಣ್ಯದ ಜೊತೆಗೆ ಉತ್ತಮ ಆರೋಗ್ಯವನ್ನು ಸಹ ಪಡೆದುಕೊಳ್ಳಬೇಕೆಂಬುದಾಗಿ ಶ್ರೀ ಸನ್ನಿ ದೇವರು ತಮ್ಮ ಆಶೀರ್ವಚನದಲ್ಲಿ ವೈಜ್ಞಾನಿಕ ವಿಶ್ಲೇಷಣೆಯನ್ನು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net