ಸಿದ್ದಾಂತ ಶಿಖಾಮಣಿ ಮನಸ್ಸನ್ನು ನಿಯಂತ್ರಿಸಬಲ್ಲದು: ಕಾಶೀ ಜಗದ್ಗುರುಗಳು

27GDG04(2)
Published on

ವಿಜಯವಾಣಿ ಸುದ್ದಿಜಾಲ ಗದಗ
ಎಲ್ಲ ಕರ್ಮಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವ ಮನಸ್ಸನ್ನು ಸಿದ್ದಾಂತ ಶಿಖಾಮಣಿ ನಿಯಂತ್ರಿಸಬಲ್ಲದು. ಮನುಷ್ಯನ ಮನಸ್ಸನ್ನು ಶ್ರೇಷ್ಠತೆಯಡೆಗೆ ಕರೆದೊಯ್ಯುವ ಶ್ರೇಷ್ಠ ಗ್ರಂಥವೇ ಸಿದ್ದಾಂತ ಶಿಖಾಮಣಿ ಎಂದು ಕಾಶೀ ಜಗದ್ಗುರು ಹೇಳಿದರು.
ನಗರದ ಎಚ್​.ಕೆ. ಪಾಟೀಲ ಸಭಾಭವನದಲ್ಲಿ ನಡೆಯುತ್ತಿರುವ ಸಿದ್ದಾಂತ ಶಿಖಾಮಣಿ ಪ್ರವಚನದ ಎರಡನೇ ದಿನದ ಆಶೀರ್ವಚನ ನೀಡಿ ಮಾತನಾಡಿದ ಅವರು, ಪ್ರಕೃತಿಯೊಂದಿಗೆ ಹೊಂದಾಣಿಕೆ ಇಲ್ಲದ ಕಾರಣ ಮನುಷ್ಯನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಪ್ರಾಣಿಗಳು ಪ್ರಕೃತಿಯೊಂದಿಗೆ ಇರುತ್ತವೆ. ಹಾಗಾಗಿ ಸದೃಢತೆ ಹೋಂದಿರುತ್ತವೆ. ಮನುಷ್ಯ ಪ್ರಕೃತಿಯ ವಿರುದ್ಧದ ಬೆಳವಣಿಗೆ ನಿಲ್ಲಿಸಬೇಕು ಎಂದರು.
ಯೋಗದ ಕುರಿತು ಮಾತನಾಡಿದ ಶ್ರೀಗಳು ಮಾನವ ಯೋಗಿ ಆಗಬೇಕು. ಮಾಡುವ ಕಾರ್ಯವನ್ನು ಶ್ರದ್ಧೆಯಿಂದ ಮಾಡುವುದೇ ಯೋಗ. ನಮ್ಮ ದೈನಂದಿನ ಕಾರ್ಯಗಳು ಯೋಗದಿಂದ ಕೂಡಬೇಕು. ಮಾಡಿ ಮಾಡಿ ಕೆಟ್ಟರು ಮನಸ್ಸಿಲ್ಲದೇ ಎಂಬ ನುಡಿಯಂತೆ ಮನಸ್ಸಿಲ್ಲದೇ ಯೋಗ ಕಾರ್ಯಗಳನ್ನು ಮಾಡಿಯೂ ಕೆಡುತ್ತಾರೆ. ಭಾವನೆ ಶುದ್ಧ ಇದ್ದಾಗ ಮಾತ್ರ ಯೋಗ ಕಾರ್ಯಗಳು ಲಿಸುತ್ತವೆ ಎಂದು ಶ್ರೀಗಳು ನುಡಿದರು.
ಪೂಜಾ ವಿಧಾನದ ಬಗ್ಗೆ ತಿಳಿ ಹೇಳಿದ ಶ್ರೀಗಳು, ಪೂಜೆ ಮಾಡಲು ನೀರು ಬೇಕು. ನೀ ಅಲ್ಲಿ ಇರಬೇಕು. ಮಾನಸಿಕವಾಗಿ ನೀ ಪುಜಾ ಸ್ಥಳದಲ್ಲಿ ಇರಬೇಕು. ವಾಸ್ತವಿಕವಾಗಿ ಪರಮಾತ್ಮನಿಗೆ ಎನು ಅಗತ್ಯವಿಲ್ಲ್ಲ. ನಾವೂ ಪರಮಾತ್ಮನ ಮಕ್ಕಳು. ದೇವರಿಗೆ ಎನೇ ನೈವೇದ್ಯ ಮಾಡಿದರೂ ಮಕ್ಕಳಿಗೆ ಲಾಭ. ನೈವೇದ್ಯ ಶುಭ್ರತೆಗಾಗಿ ಮಾಡಲಾಗುತ್ತದೆ. ಮನಸ್ಸು ಶುಭ್ರವಾಗಬೇಕಾದರೆ ನಮಗೀಷ್ಟದ ದೇವರಿಗೆ ನೈವೇದ್ಯ ಮಾಡಿ, ಅದನ್ನು ನಾವು ಬಳಸಬೇಕು. ಪರಮಾತ್ಮನಿಗೆ ಶುದ್ಧ ಭಾವನೆಗಳ ಹಸಿವು ಇದೆ ವಿನಹ ಭಾವಶೂನ್ಯ ಪೂಜೆಯನ್ನು ಸಹ ದೇವರು ಸ್ವೀಕರಿಸುವುದಿಲ್ಲ ಎಂದು ಕಾಶೀ ಜಗದ್ಗರುಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸಾದ ಸೇವೆ ನೀಡಿದವನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್​ ಸದಸ್ಯ ಎಸ್​.ವಿ. ಸಂಕನೂರು, ಎಂ.ಎಂ. ಹಿರೇಮಠ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net