ಬಡವರಿಗೆ ಸಹಾಯಹಸ್ತ ಚಾಚಿದ್ದ ಕೆ.ಶಿವರಾಂ

nrp shivaram
ಎನ್.ಆರ್.ಪುರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಛಲವಾದಿ ಮಹಾದಿಂದ ಕೆ.ಶಿವರಾಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷ ಡಿ.ರಾಮು, ಎ.ಸಿ.ಶ್ರೀನಿವಾಸ್, ಭಾನುಮತಿ, ಪವಿತ್ರಾ, ಶೈಲಜಾ, ಚಂದ್ರು ಇತರರಿದ್ದರು.
Published on

ಎನ್.ಆರ್.ಪುರ: ನಟ, ಐಎಎಸ್ ನಿವೃತ್ತ ಅಧಿಕಾರಿ ಕೆ.ಶಿವರಾಂ ನಿಧನ ಎಸ್ಸಿ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಡಿ.ರಾಮು ಹೇಳಿದರು.

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ತಾಲೂಕು ಛಲವಾದಿ ಮಹಾಸಭಾದಿಂದ ಆಯೋಜಿಸಿದ್ದ ಕೆ.ಶಿವರಾಂ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಬಡ ಕುಟುಂಬದ ಕೆ.ಶಿವರಾಂ ಕನ್ನಡದಲ್ಲಿ ಐಎಎಸ್ ತೇರ್ಗಡೆ ಮಾಡಿದ ಪ್ರಥಮರು. ಅವರು ಶೋಷಿತರು, ಬಡವರ, ಹಿಂದುಳಿದ ಸಮುದಾಯದವರಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದರು.
ವಾಲ್ಮೀಕಿ ನಾಯಕ ಸಂಘದ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್ ಮಾತನಾಡಿ, ಕೆ.ಶಿವರಾಂ ದಲಿತರ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು.
ಮುಖಂಡ ಎಚ್.ಎಂ.ಶಿವಣ್ಣ ಮಾತನಾಡಿ, ಬಡವರು, ದಲಿತ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಸಹಾಯಧನ, ಐಎಎಸ್, ಐಪಿಎಸ್‌ನಂಥ ಉನ್ನತ ಹುದ್ದೆಗಳಿಗೆ ತರಬೇತಿ ಕೇಂದ್ರಗಳನ್ನು ತೆರೆದು ನೆರವಾಗಿದ್ದರು ಎಂದು ಹೇಳಿದರು.
ತಾಲೂಕು ಛಲವಾದಿ ಮಹಾಸಭಾ ಪದಾಧಿಕಾರಿಗಳು ಹಾಗೂ ದಲಿತ ಸಮುದಾಯದ ಮುಖಂಡರು ಮೇಣದ ಬತ್ತಿ ಹಚ್ಚಿ ಶಾಂತಿ ಕೋರಿದರು.
ತಾಲೂಕು ಛಲವಾದಿ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಭಾನುಮತಿ, ಪದಾಧಿಕಾರಿಗಳಾದ ಪವಿತ್ರಾ, ಶೈಲಜಾ, ಭವಾನಿ, ವಿಮಲಾ, ಮೀನಾಕ್ಷಿ, ಕಾನೂರು ಚಂದ್ರು, ಸುಜಿತ್, ಮುಕುಂದ, ಚಂದ್ರಶೇಖರ್, ಸುಬ್ರಹ್ಮಣ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net