ಕಲ್ಯಾಣ್​ ಮನೆ ಒಡೆದ ಜ್ಯೋತಿ ಕುಲಕರ್ಣಿ ಸಾಮಾನ್ಯಳಲ್ಲ ಎಂದ್ರು ಪೊಲೀಸ್ ಅಧಿಕಾರಿ!

Jyoti Kulkrni
Published on

ಕೊಪ್ಪಳ: ಕೆ.ಕಲ್ಯಾಣ್​ ಕೌಟುಂಬಿಕ ಕಲಹಕ್ಕೆ ಕಾರಣರಾಗಿರುವವರಲ್ಲಿ ಪ್ರಮುಖಳಾಗಿರುವ ಜ್ಯೋತಿ ಕುಲಕರ್ಣಿ (ಗಂಗಾ ಕುಲಕರ್ಣಿ) ಸಾಮಾನ್ಯಳಲ್ಲ ಎಂಬ ಮಾತನ್ನು ಪೊಲೀಸ್​ ಅಧಿಕಾರಿಯೋರ್ವರೇ ಹೇಳಿದ್ದಾರೆ.

ಜ್ಯೋತಿ ಕುಲಕರ್ಣಿ ಈಗಾಗಲೇ ಹಲವರನ್ನು ವಂಚಿಸಿದ್ದಾಳೆ ಎಂದು ಗೊತ್ತಾಗಿದೆ. ಕೊಪ್ಪಳದಲ್ಲೂ ತನ್ನ ಕರಾಮತ್ತು ತೋರಿದ್ದಾಳೆ.

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು 20 ಜನರಿಗೆ ತಲಾ 3 ಲಕ್ಷ ರೂ.ವಂಚಿಸಿದ್ದಳು. ಈ ಪ್ರಕರಣವನ್ನು ಅಂದಿನ ಕುಷ್ಟಗಿ ಸಿಪಿಐ ಆಗಿದ್ದ ವಿಶ್ವನಾಥ್ ಹಿರೇಗೌಡರು ತನಿಖೆ ಮಾಡಿದ್ದರು. ಇದೀಗ ಅವರೇ ಜ್ಯೋತಿ ಕುಲಕರ್ಣಿ ಸಾಮಾನ್ಯ ಮಹಿಳೆ ಅಲ್ಲ ಎಂದು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net