ಗುರು ರ್ಪೂಣಿಮಾ ಕಾರ್ಯಕ್ರಮ ಜು. 7ರಿಂದ

je721538035802367-abc
Published on

ರಾಣೆಬೆನ್ನೂರ: ಇಲ್ಲಿನ ಶ್ರೀ ಕೊಟ್ಟೂರೇಶ್ವರ ನಗರದ ಶ್ರೀ ಗುರು ಕೊಟ್ಟೂರೇಶ್ವರ ಮಠದಲ್ಲಿ ಜು. 7ರಿಂದ 10ರ ವರೆಗೆ ಶ್ರೀ ಬಸವಾದಿ ಶಿವಶರಣರ ಪ್ರವಚನ ಮತ್ತು ಗುರು ರ್ಪೂಣಿಮಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜು. 7ರಿಂದ 9ರ ವರೆಗೆ ಪ್ರತಿದಿನ ಸಂಜೆ 6ರಿಂದ ರಾತ್ರಿ 8.30ರ ವರೆಗೆ ಬೆಳಗಾವಿ ಕಾರಂಜಿ ಮಠದ ಡಾ.ಶಿವಯೋಗಿ ದೇವರು ಪ್ರವಚನ ನೀಡುವರು. ಜು. 10ರಂದು ಬೆಳಗ್ಗೆ 10.30ಕ್ಕೆ ಗುರು ರ್ಪೂಣಿಮಾ ಅಂಗವಾಗಿ ಅರಕೆರೆ ಸಿದ್ಧಲಿಂಗ ಶಿವಯೋಗಿ ವಿರಕ್ತಮಠದ ಶಿವಲಿಂಗ ಸ್ವಾಮೀಜಿಯವರ ಮೆರವಣಿಗೆ ನಗರದ ದೊಡ್ಡಪೇಟೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಶ್ರೀ ಗುರು ಕೊಟ್ಟೂರೇಶ್ವರ ಮಠದವರೆಗೆ ಜರುಗಲಿದೆ. ಮಧ್ಯಾಹ್ನ 12ಕ್ಕೆ ಶ್ರೀಗಳ ತುಲಾಭಾರ ಹಾಗೂ ಧರ್ಮಸಭೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net