ಕಿರಿಯರ ಅಥ್ಲೆಟಿಕ್ಸ್: ರಾಜ್ಯದ ನುರುಪಾಗೆ ಚಿನ್ನ, ಪುಷ್ಪಕ್​ಗೆ ರಜತ

ಕಿರಿಯರ ಅಥ್ಲೆಟಿಕ್ಸ್: ರಾಜ್ಯದ ನುರುಪಾಗೆ ಚಿನ್ನ, ಪುಷ್ಪಕ್​ಗೆ ರಜತ
ಕಿರಿಯರ ಅಥ್ಲೆಟಿಕ್ಸ್: ರಾಜ್ಯದ ನುರುಪಾಗೆ ಚಿನ್ನ, ಪುಷ್ಪಕ್​ಗೆ ರಜತ
Published on
ಬೆಂಗಳೂರು: ಕರ್ನಾಟಕದ ನುರುಪಾ ಹೊಳ್ಳ ಮತ್ತು ಪುಷ್ಪಕ್​ ನೆಲವಾಡೆ ಪಂಜಾಬ್​ನ ಲುಧಿಯಾನಾದಲ್ಲಿ ಗುರುವಾರ ಮುಕ್ತಾಯಗೊಂಡ 21ನೇ ರಾಷ್ಟ್ರೀಯ ಯೂತ್​ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ನಲ್ಲಿ (National Youth Athletics Championship) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಕೂಟದ 3ನೇ ಮತ್ತು ಕೊನೇ ದಿನ ನಡೆದ ಬಾಲಕಿಯರ 100 ಮೀ. ಹರ್ಡಲ್ಸ್​ನಲ್ಲಿ ನುರುಪಾ ಹೊಳ್ಳ 13.78 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಅಗ್ರಸ್ಥಾನ ಪಡೆದರು. ತಮಿಳುನಾಡಿನ ರಾಜಶ್ರೀ ವಿ.ಬಿ. 14.23 ಸೆಕೆಂಡ್​ಗಳಲ್ಲಿ ಓಡಿ ಬೆಳ್ಳಿ ಜಯಿಸಿದರೆ, ಉತ್ತರ ಪ್ರದೇಶದ ಖುಷಿ ಪಟೇಲ್​ 14.42 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿಗೆ ತೃಪ್ತಿಪಟ್ಟರು.

ಪುಷ್ಪಕ್​ ನೆಲವಾಡೆ ಬಾಲಕರ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ 76.09 ಮೀ. ಎಸೆತದೊಂದಿಗೆ ರಜತ ಪದಕಕ್ಕೆ ಕೊರಳೊಡ್ಡಿದರು. ಮಧ್ಯಪ್ರದೇಶದ ಕ್ರಿಷನ್​ ಚಂದ್ರ 79.92 ಮೀ. ದೂರ ಎಸೆದು ಚಿನ್ನ ಗೆದ್ದರೆ, ರಾಜಸ್ಥಾನದ ಮಂಜೀತ್​ ಕುಮಾರ್​ 74.45 ಮೀ. ಎಸೆತದೊಂದಿಗೆ ಕಂಚು ಗಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net