ಶೀಘ್ರದಲ್ಲೇ ಜ್ಯುಬಿಲಿಯೆಂಟ್​ ಕಾರ್ಖಾನೆಯ ಕರೊನಾ ನಂಜಿನ ಮೂಲ ಬಹಿರಂಗ: ಸಚಿವ ಎಸ್​.ಟಿ. ಸೋಮಶೇಖರ್​‘

somashekar
Published on

ಮೈಸೂರು: ಕೊವಿಡ್​ 19 ಹಾಟ್​ಸ್ಪಾಟ್​ ಎನಿಸಿಕೊಂಡಿರುವ ನಂಜನಗೂಡಿನ ಜ್ಯುಬಿಲಿಯೆಂಟ್​ ಕಾರ್ಖಾನೆಯ ನಂಜಿನ ಮೂಲವನ್ನು ಶೀಘ್ರದಲ್ಲೇ ಬಯಲುಗೊಳಿಸುವುದಾಗಿ ಸಚಿವ ಎಸ್​.ಟಿ. ಸೋಮಶೇಖರ್​ ಭರವಸೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾರ್ಖಾನೆಯಿಂದ ಸೋಂಕು ಹರಡುವ ಮೂಲ ಕಾರಣ ಯಾವುದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹಿರಿಯ ಐಎಎಸ್​ ಅಧಿಕಾರಿ ಹರ್ಷ ಗುಪ್ತಾ ಅವರ ನೇತೃತ್ವದಲ್ಲಿ ಈ ತನಿಖೆ ನಡೆಯುತ್ತಿದೆ. ಆದ್ದರಿಂದ, ಶೀಘ್ರದಲ್ಲೇ ನಂಜಿನ ಮೂಲದ ಕುರಿತು ಮಾಹಿತಿ ಲಭಿಸುವ ವಿಶ್ವಾಸವಿದೆ ಎಂದು ಹೇಳಿದರು.

ಸರ್ಕಾರ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿದೆ. ಜನರು ಕೂಡ ಸಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸಬೇಕು. ಆಗ ಅದನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net