ಜೂ.ಎನ್‌ಟಿಆರ್-ಹೃತಿಕ್ ರೋಷನ್ ಅಭಿನಯದ 'ವಾರ್ 2' ಟ್ರೈಲರ್​ ರಿಲೀಸ್| ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ war-2

war2
Published on

war-2 ; 2025ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ 'ವಾರ್ 2' ಚಿತ್ರದ ಟ್ರೈಲರ್​ ಇಂದು (ಜು.25) ರಿಲೀಸ್​ ಆಗಿದೆ.

ಅಯಾನ್ ಮುಖರ್ಜಿ ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಮತ್ತು ಸೂಪರ್ ಸ್ಟಾರ್ ನಾಯಕ ಜೂನಿಯರ್ ಎನ್​.ಟಿ.ಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ.

(ಏಜೆನ್ಸೀಸ್)

2 ನಿಮಿಷ 35 ಸೆಕೆಂಡುಗಳ ಈ ಟ್ರೈಲರ್​ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸಂಚಲನ ಮೂಡಿಸಿದೆ. ಟ್ರೈಲರ್​ನಲ್ಲಿ ಹೃತಿಕ್ ರೋಷನ್ ಮತ್ತು ಜೂ ಎನ್​ಟಿಆರ್ ಇಬ್ಬರ ಎಂಟ್ರಿ ಹಾಗೂ ಕೆಲವು ಆಕ್ಷನ್ ದೃಶ್ಯಗಳನ್ನು ತೋರಿಸಲಾಗಿದ್ದು, ಆಕ್ಷನ್ ದೃಶ್ಯಗಳಂತೂ ಸಾಕಷ್ಟು ಗಮನ ಸೆಳೆಯುವಂತಿದೆ. ಅದ್ದೂರಿ ಸಾಹಸ ದೃಶ್ಯಗಳಲ್ಲಿ ಹೃತಿಕ್, ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ಇಬ್ಬರೊಂದಿಗೂ ಮುಖಾಮುಖಿಯಾಗಿ ಹೋರಾಡುವುದರ ಜೊತೆಗೆ, ದೇಶಭಕ್ತಿ ಕೂಡ ಕಾಣಬಹುದು. ಈ ದೃಶ್ಯ ನೋಡುಗರಿಗೆ ರೋಮಾಂಚನಕಾರಿ ಎಂದೆನಿಸುತ್ತದೆ. ಈ ಟ್ರೈಲರ್​ ಹೃತಿಕ್ ರೋಷನ್ ಅವರೊಂದಿಗಿನ ಅವರ ಹೋರಾಟದ ದೃಶ್ಯಗಳ ಒಂದು ನೋಟವನ್ನು ತೋರಿಸಲಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಭರವಸೆ ಮೂಡಿಸಿದೆ.

ಆಕ್ಷನ್, ಕ್ರೈಮ್, ಥ್ರಿಲ್ಲರ್ ಚಿತ್ರವಾದ 'ವಾರ್ 2' 2019 ರ 'ವಾರ್' ಚಿತ್ರದ ಎರಡನೇ ಭಾಗವಾಗಿದ್ದು, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಒಂದು ದಿನ ಮೊದಲು ಅಂದರೆ ಮುಂದಿನ (ಆ.14) ರಂದು ಬೆಳ್ಳಿತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net