ಹೃದಯಾಘಾತಕ್ಕೆ ಖ್ಯಾತ ಟಾಲಿವುಡ್​ ನಿರ್ಮಾಪಕ ಜಯದೇವ್ ಬಲಿ

director
Published on

ಹೈದರಾಬಾದ್: ತೆಲುಗು ಚಿತ್ರ ನಿರ್ಮಾಪಕ, ಹಿರಿಯ ಪತ್ರಕರ್ತ ಕೆ.ಜಯದೇವ್(49) ಹೃದಯಾಘಾತದಿಂದ ಸೋಮವಾರ ರಾತ್ರಿ ಹೈದರಾಬಾದ್‌ನಲ್ಲಿ ನಿಧನರಾದರು.

ಬಹುಮುಖ ಪ್ರತಿಭೆ ಎಂದು ಪರಿಗಣಿಸಲ್ಪಟ್ಟ ಕೆ ಜಯದೇವ್ 2022 ರಲ್ಲಿ 'ಕೊರಂಗಿ ನುಂಚಿ' ಮೂಲಕ ತಮ್ಮ ಸಿನಿಜರ್ನಿಯನ್ನು ಪ್ರಾರಂಭಿಸಿದರು, ಇದನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ) ನಿರ್ಮಿಸಿತ್ತು.

ಅವರ ಗಮನಾರ್ಹ ಸಾಧನೆಗಳಲ್ಲಿ 'ಸುರಭಿ', 'ಜನನಿ', 'ಪ್ರೊ.ಸಿಎನ್‌ಆರ್ ರಾವ್ - ಭವಿಷ್ಯವನ್ನು ತಿಳಿದ ವ್ಯಕ್ತಿ' ಮತ್ತು 'ಎಂ.ಎಸ್. ಸ್ವಾಮಿನಾಥನ್ - 'ಬಡತನ ಮತ್ತು ಹಸಿವಿಗಾಗಿ' ಮುಂತಾದ ಶೀರ್ಷಿಕೆಗಳನ್ನು ಒಳಗೊಂಡಂತೆ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದ ಅವರು ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದರು.

ಕೆ.ಜಯದೇವ್ ಖ್ಯಾತ ಹಿರಿಯ ಪತ್ರಕರ್ತ ಕೆ.ಎನ್‌.ಟಿ. ಶಾಸ್ತ್ರಿಯವರ ಕಿರಿಯ ಪುತ್ರ. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net