ತಾಯಿಯಾಗುತ್ತಿರುವ ಸಂತಸದಲ್ಲಿ `ಜೊತೆ ಜೊತೆಯಲಿ' ಧಾರಾವಾಹಿ ನಟಿ ಆಶಿತಾ ಚಂದ್ರಪ್ಪ

ashitachandrappa
Published on

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರವಾಹಿಯ ಖ್ಯಾತಿಯ ಆಶಿತಾ ಚಂದ್ರಪ್ಪ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದು, ಅಭಿಮಾನಿಗಳು ಕಾಮೆಂಟ್​ ಮಾಡುವ ಮೂಲಕವಾಗಿ ವಿಶ್​​ ಮಾಡುತ್ತಿದ್ದಾರೆ.

ಮೊದಲ ಫೋಟೋದಲ್ಲಿ ತಂದೆ ಮುತ್ತು ಕೊಡುತ್ತಿದ್ದಾರೆ 'ಎಲ್ಲದಕ್ಕೂ ವಂದನೆಗಳು ತಂದೆ' ಅಶಿತಾ  ಬರೆದುಕೊಂಡಿದ್ದಾರೆ. ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ಬೇಬಿ ಬಂಪ್ ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಸ್ಯಾಂಡಲ್​ವುಡ್​​ ನಟಿ-ನಟರು ಸೇರಿದಂತೆ ಅಭಿಮಾನಿಗಳು ವಿಶ್​​ ಮಾಡಿದ್ದಾರೆ.

‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಆಶಿತಾ ನಟಿಸಿದ್ದರು. ಬಳಿಕ ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದರು. ‘ರಾಧಾ ರಮಣ’ ಧಾರಾವಾಹಿಯಲ್ಲಿ ರಮಣ ತಂಗಿ ಅವನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಕಳೆದ 2021ರ ವರ್ಷದ ಅಂತ್ಯದಲ್ಲಿ ಉದ್ಯಮಿ ರೋಹನ್ ರಾಘವೇಂದ್ರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ನಟಿ ಬಣ್ಣದ ಜಗತ್ತಿನಿಂದ ದೂರ ಉಳಿದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net