ಜೊಲ್ಲೆ ದಂಪತಿಯಿಂದ ನಿಪ್ಪಾಣಿ ಅಭಿವೃದ್ಧಿ

7..2
ಬೋರಗಾಂವ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜೋಡೆತ್ತಿನ ಗಾಡಿ ಶರ್ಯತ್ತು ವಿಜೇತರಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಬಹುಮಾನ ವಿತರಿಸಿದರು. ದಾದಾಸಾಹೇಬ ಭಾದುಲೆೆ, ಸುನೀಲ ಪಾಟೀಲ್, ಶಿವಾಜಿ ಬೋರೆ ಇತರರು ಇದ್ದಾರೆ.
Published on

ಬೋರಗಾಂವ: ಸಂಸದ ಅಣ್ಣಾಸಾಹೇಬ ಜೊಲ್ಲೆ ಜನ್ಮ ದಿನ ನಿಮಿತ್ತ ತಾಲೂಕಿನಾದ್ಯಂತ ಸಾಮಾಜಿಕ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಪಪಂ ಸದಸ್ಯ ಶರದ ಜಂಗಟೆ ಹೇಳಿದರು.

ಪಟ್ಟಣದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ 61ನೇ ಜನ್ಮದಿನದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಅವರು ಮಾತನಾಡಿ, ಜೊಲ್ಲೆ ದಂಪತಿಯಿಂದ ತಾಲೂಕು ಅಭಿವೃದ್ಧಿ ಹೊಂದುತ್ತಿದೆ ಎಂದರು.

ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಶಿವಕನವಾಡಿಯ ರಾಹುಲ್ ಅರಗೆ ಪ್ರಥಮ, ಸಾಂಗಲಿಯ ಸಂಭಾಜಿ ಖಾರತ್ ದ್ವಿತೀಯ ಹಾಗೂ ಹಾತಕನಗಲೆಯ ಹೈದರ್‌ಅಲಿ ಮುಜಾವರ್ ತೃತೀಯ ಸ್ಥಾನ ಪಡೆದರು. ಸಾಮಾನ್ಯ ಕುದುರೆ ಗಾಡಿ ಓಟದಲ್ಲಿ ಬೋರಗಾಂವದ ಗಬ್ಬರ್ ಪ್ರೇಮಿ ಕುದುರೆ ಪ್ರಥಮ, ಲಗಮಣ್ಣ ಬ್ಯಾಕೂಡ್ ಕುದುರೆ ದ್ವಿತೀಯ ಹಾಗೂ ಬೋರಗಾಂವವಾಡಿಯ ಸೋನ್ಯಾ ಪ್ರೇಮಿ ಕುದುರೆ ತೃತೀಯ ಸ್ಥಾನ ಪಡೆಯಿತು.

ಪಪಂ ಮಾಜಿ ಸದಸ್ಯ ಬಾಬಾಸಾಹೇಬ ಚೌಗುಲೆ, ದಾದಾಸಾಹೇಬ ಭಾದುಲೆೆ, ಸುನೀಲ ಪಾಟೀಲ, ಶಿವಾಜಿ ಬೋರೆ, ಬಾಬಾಸಾಹೇಬ್ ಚೌಗುಲೆ, ಜಮೀಲ್ ಅತ್ತಾರ್, ದಾದಾ ಪೂಜಾರಿ, ಅಜಿತ್ ತೇರದಾಳೆ, ಫಿರೋಜ್ ಅಫ್ರಾಜ್, ಭರತ ಜಂಗಟೆ, ರಮೇಶ ಮಾಲಗಾವೆ, ಭೀಮಾ ಚೌಗುಲೆ, ಮಹಿಪತಿ ಖೋತ, ರುತರಾಜ ಪಾಟೀಲ, ಶೇಸು ಐದಮಾಳೆ, ವಿಷ್ಣು ತೋಡಕರ, ನಿಖಿಲ್ ಚಿಪ್ರೆ, ಶೀತಲ್ ಹವಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net