ಯುಎಸ್​ ಅಧ್ಯಕ್ಷ ಜೋ ಬೈಡನ್​ಗೆ ಕೋವಿಡ್​ ದೃಢ

ವಿಜಯವಾಣಿ (53)
Published on

ವಾಷಿಂಗ್ಟನ್: ನಿನ್ನೆ (ಜು.17) ಅಮೆರಿಕ ಅಧ್ಯಕ್ಷ ಜೋ ಬೈಡನ್​ ಅವರಿಗೆ ಕೋವಿಡ್‌ ಪಾಸಿಟಿವ್​ ದೃಢವಾಗಿದ್ದು, ಧನಾತ್ಮಕ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ. ಭಾಷಣಕ್ಕೂ ಮುಂಚಿತವಾಗಿಯೇ ಟೆಸ್ಟ್​ ಮಾಡಿಸಿದ್ದ ಬೈಡನ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಪದೇ ಪದೇ ಶೀತ ಕಾಣಿಸಿಕೊಂಡಿದ್ದ ಹಿನ್ನಲೆ ಅವರಿಗೆ ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಸೋಂಕು ಇರುವುದು ದೃಢವಾಗಿದೆ. ಈ ಕುರಿತು​ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿಯಾದ ಕರೀನ್ ಜೀನ್ ಪಿಯರ್ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಶೀತ, ಕೆಮ್ಮು ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದ ಜೋ ಬೈಡನ್​, ಕೋವಿಡ್ ಸೋಂಕಿಗೆ ಸಂಬಂಧಿಸಿದ ಔಷಧಿಗಳನ್ನು ಪ್ರತ್ಯೇಕವಾಗಿ ತಮ್ಮ ಕೊಠಡಿಯಲ್ಲಿದ್ದು ತೆಗೆದುಕೊಳ್ಳುತ್ತಿದ್ದರು. ಈ ಮೂಲಕ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದರು. ಇದೀಗ ಪಾಸಿಟಿವ್ ಬರುತ್ತಿದ್ದಂತೆ ವಿಶ್ರಾಂತಿ ಪಡೆಯಲು ಮುಂದಾದ ಅಧ್ಯಕ್ಷರು, ಮಾಧ್ಯಮಗಳತ್ತ ಕೈಬೀಸಿ, ನಾನು ಆರೋಗ್ಯವಾಗಿ, ಚೆನ್ನಾಗಿರುವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net