

ಹೈದರಾಬಾದ್: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ನಲ್ಲಿ ವಿವಿಧ 510 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಯೋಜನಾ ಸಮನ್ವಯಕಾರರು -10, ಯಂಗ್ ಫೆಲೋ-250, ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ- 250 ಹುದ್ದೆಗಳಿವೆ.
ರಾಜ್ಯ ಯೋಜನಾ ಸಮನ್ವಯಕಾರ ಹುದ್ದೆಗೆ ಅರ್ಥಶಾಸ್ತ್ರ / ಗ್ರಾಮೀಣ ಅಭಿವೃದ್ಧಿ/ ಗ್ರಾಮೀಣ ನಿರ್ವಹಣೆ/ ರಾಜ್ಯಶಾಸ್ತ್ರ/ ಸಮಾಜಶಾಸ್ತ್ರ /ಸಾಮಾಜಿಕ ಕಾರ್ಯ/ ಅಭಿವೃದ್ದಿ ಅಧ್ಯಯನ ವಿಷಯದಲ್ಲಿ ಸ್ನಾತಕೊತ್ತರ ಪದವಿ ಆಗಿರಬೇಕು. ಗುತ್ತಿಗೆ ವೇತನ ಮಾಸಿಕ 55,000/- ರೂ. ಇರುತ್ತದೆ.
ಯಂಗ್ ಫೆಲೋ ಹುದ್ದೆಗೆ ಮೇಲೆ ತಿಳಿಸಿದ ವಿದ್ಯಾರ್ಹತೆಯೇ ಇದಕ್ಕೂ ಅನ್ವಯಿಸುತ್ತದೆ. ಮಾಸಿಕ ವೇತನ 35ಸಾವಿರ ರೂ. ಇರುತ್ತದೆ. ಕ್ಲಸ್ಟರ್ ಮಟ್ಟದ ಸಂಪನ್ಮೂಲ ವ್ಯಕ್ತಿ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ಮಾಸಿಕ ವೇತನ 12,500/- ರೂ. ಇರುತ್ತದೆ. ಆಗಸ್ಟ್ 10ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಎನ್ಐಆರ್ಡಿಪಿ ವೆಬ್ಸೈಟ್ http://nirdpr.org.in ನೊಡಬಹುದು.