ಪದವಿ ಆದವರಿಗೆ ಎನ್​ಸಿಟಿಇಯಲ್ಲಿ ಯಾವ ಹುದ್ದೆ?

Job opportunities
Published on

ನವದೆಹಲಿ : ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್ (ಎನ್​ಸಿಟಿಇ) ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಗ್ರೇಡ್ ಸಿ, ಸ್ಟೆನೋಗ್ರಾಫರ್ ಗ್ರೇಡ್ ಡಿ, ಲೋವರ್ ಡಿವಿಜನ್ ಕ್ಲರ್ಕ್ ಮತ್ತು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿವೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ನೇಮಕಾತಿ ನಡೆಯುತ್ತದೆ.

ಪಿಯುಸಿ, ಪದವಿ ಪಾಸಾದವರು, ಶೀಘ್ರಲಿಪಿ, ಟೈಪಿಂಗ್ ಅರ್ಹತೆ , ಕಾರ್ಯಾನುಭವ ಇರುವವರು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗನುಗುಣವಾಗಿ ವಯೋಮಿತಿ ಕನಿಷ್ಠ 18/20 ವರ್ಷ ಹಾಗೂ ಗರಿಷ್ಠ 25/27 ವರ್ಷ ನಿಗದಿಪಡಿಸಲಾಗಿದೆ. www.ncte.gov.in ಮೂಲಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19ರ ವರೆಗೆ ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net