ಬಿಇಸಿಐಎಲ್​​​ನಲ್ಲಿ ಅಡ್ಮಿನಿಸ್ಟ್ರೇಟಿವ್ ಎಕ್ಸಿಕ್ಯೂಟಿವ್​​ ಹುದ್ದೆಗಿದೆ ಮಾಸಿಕ ಸಂಬಳ 45 ಸಾವಿರ ರೂ.

BECIL
Published on

ನವದೆಹಲಿ: ಬ್ರಾಡ್​ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್)ನಲ್ಲಿ ಅಡ್ಮಿನಿಸ್ಟ್ರೇಟಿವ್ ಎಕ್ಸಿಕ್ಯೂಟಿವ್ ಇತ್ಯಾದಿ ಹುದ್ದೆಗಳಿಗೆ ತಾತ್ಕಾಲಿಕ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಡ್ಮಿನಿಸ್ಟ್ರೇಟಿವ್ ಎಕ್ಸಿಕ್ಯೂಟಿವ್, ಕಾರ್ಪೋರೇಟ್ ಎಕ್ಸಿಕ್ಯೂಟಿವ್, ಅಕೌಂಟ್ ಎಕ್ಸಿಕ್ಯೂಟಿವ್, ಪೇಷಂಟ್ ಕೇರ್ ಮ್ಯಾನೇಜರ್, ಸೂಪರ್ ವೈಸರ್, ರಿಸೆಪ್ಷನಿಸ್ಟ್, ರೇಡಿಯೋಗ್ರಾಫರ್, ಅಕೌಂಟೆಂಟ್, ಲ್ಯಾಬ್ ಅಸಿಸ್ಟೆಂಟ್, ಕ್ಯಾಷಿಯರ್, ಫ್ಲೆಬಾಟಮಿಸ್ಟ್, ಜ್ಯೂ, ಲ್ಯಾಬ್ ಟೆಕ್ನಾಲಜಿಸ್ಟ್, ಪೇಷಂಟ್ ಕೇರ್ ಕೋ ಆರ್ಡಿನೇಟರ್, ಡೇಟಾ ಎಂಟ್ರಿ ಆಪರೇಟರ್, ಡ್ರೈವರ್, ಲಿಫ್ಟ್​ಮನ್, ಎಂಟಿಎಸ್ ಹುದ್ದೆಗಳಿವೆ.

ಅಡ್ಮಿನಿಸ್ಟ್ರೇಟಿವ್ ಎಕ್ಸಿಕ್ಯುಟಿವ್ ಹುದ್ದೆಗೆ 45 ಸಾವಿರ ರೂ. ಮಾಸಿಕ ಸಂಬಳವಿದೆ.  ಅರ್ಜಿ ಸಲ್ಲಿಸಲು ಜುಲೈ 15 ರ ವರೆಗೆ ಅವಕಾಶವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬಿಇಸಿಐಎಲ್ ವೆಬ್​ಸೈಟ್ https://www.becil.com ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net