'ಮುಸ್ಲಿಮರನ್ನು ಬಲಿಪಶುಗಳನ್ನಾಗಿಸಲು ಬಿಡುವುದಿಲ್ಲ'; ತಬ್ಲಿಘಿ ಜಮಾತ್ ಸಂಘಟನೆಯ​ ಬೆಂಬಲಕ್ಕೆ ನಿಂತ ಜೆಎನ್​ಯು ವಿದ್ಯಾರ್ಥಿ ಗುಂಪು

Muslmsss
Published on

ನವದೆಹಲಿ: ನಿಜಾಮುದ್ದೀನ್​ ಮರ್ಕಜ್​ ಮಸೀದಿಯ ವಿವಾದ ದೊಡ್ಡದಾಗುತ್ತಿದೆ. ಕರೊನಾ ವೈರಸ್​ ನಿಯಂತ್ರಣದ ಕ್ರಮವಾಗಿ ದೆಹಲಿ ಸರ್ಕಾರ 144 ಸೆಕ್ಷನ್​ ಜಾರಿ ಮಾಡಿದ್ದರೂ ಅದನ್ನು ಉಲ್ಲಂಘಿಸಿ ಮಸೀದಿಯಲ್ಲಿ ಧಾರ್ಮಿಕ ಸಭೆ ನಡೆಸಿದ ತಬ್ಲಿಘಿ ಜಮಾತ್​ ಮುಖ್ಯಸ್ಥ ಮೌಲಾನಾ ಸಾದ್​ ಖಾಂಡ್ಲಾವಿ ಸೇರಿ ಹಲವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.

ಆದರೆ ಪೊಲೀಸರ ಈ ಕ್ರಮವನ್ನು ದೆಹಲಿಯ ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯದ (ಜೆಎನ್​ಯು)ಮುಸ್ಲಿಂ ವಿದ್ಯಾರ್ಥಿಗಳ ಗುಂಪು ಕಟುವಾಗಿ ವಿರೋಧಿಸಿದೆ. ತಬ್ಲಿಘಿಗೆ ಬೆಂಬಲ ನೀಡುವುದಾಗಿ ಹೇಳಿದೆ. ಮುಸ್ಲಿಮರನ್ನು ನೀವು ಬಲಿಪಶುಗಳನ್ನಾಗಿ ಮಾಡಲು ಸಾಧ್ಯವಿಲ್ಲ. ನಾವು ತಬ್ಲಿಘಿಯ ಪರ ನಿಲ್ಲುತ್ತೇವೆ ಎಂಬಂತಹ ಪೋಸ್ಟರ್​ಗಳನ್ನು ಪ್ರದರ್ಶಿಸಿದ್ದಾರೆ. ಎಫ್​ಐಆರ್​ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಹಾಗೇ ಈ ವಿದ್ಯಾರ್ಥಿಗಳ ಗುಂಪು ವಲಸೆ ಕಾರ್ಮಿಕರ ಪರವಾಗಿಯೂ ಧ್ವನಿ ಎತ್ತಿದೆ. ವಲಸಿಗರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಅವರಿಗೆ ಆಶ್ರಯ ಕಲ್ಪಿಸಿಕೊಡಿ ಎಂದು ಮನವಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜೆಎನ್​ಯುದ ಈ ಮುಸ್ಲಿಂ ವಿದ್ಯಾರ್ಥಿಗಳ ಸಂಘಟನೆಯನ್ನು ಹುಟ್ಟುಹಾಕಿದ್ದು ಸದ್ಯ ದೇಶದ್ರೋಹದ ಪ್ರಕರಣದಲ್ಲಿ ಜೈಲಿನಲ್ಲಿರುವ ಶರ್ಜೀಲ್​ ಇಮಾಮ್​ ಎಂಬಾತ. ಮುಸ್ಲಿಂ ವಿರೋಧಿ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸಲೆಂದೇ ಆತ ಈ ಸಂಘಟನೆಯನ್ನು ಸ್ಥಾಪಿಸಿದ್ದಾನೆ ಎಂದು ಜೆಎನ್​ಯುದ ಬೇರೆ ಕೆಲವು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net