JNU PG Merit List 2023: ಶೀಘ್ರದಲ್ಲೇ ಮೆರಿಟ್ ಪಟ್ಟಿ ಬಿಡುಗಡೆ, ಈ ಲಿಂಕ್ ಬಳಸಿ ಚೆಕ್ ಮಾಡಿ

girl (1)
Published on

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯವು (ಜೆಎನ್‌ಯು) ಇಂದು (ಆಗಸ್ಟ್ 18, 2023 ರಂದು) ಸ್ನಾತಕೋತ್ತರ ಮತ್ತು ಎಡಿಒಪಿ ಪ್ರವೇಶಕ್ಕಾಗಿ ಮೊದಲ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಆದರೆ ಪಿಜಿಯ ಮೊದಲ ಮೆರಿಟ್ ಪಟ್ಟಿಯನ್ನು ತಾತ್ಕಾಲಿಕವಾಗಿ ಘೋಷಿಸಬಹುದು ಎಂದು ವೇಳಾಪಟ್ಟಿಯಲ್ಲಿ ಹೇಳಲಾಗಿದೆ. ಇಂದು ಅಥವಾ ಸಾಧ್ಯವಾದಷ್ಟು ಬೇಗ ಪಟ್ಟಿಯನ್ನು ಘೋಷಿಸುವ ನಿರೀಕ್ಷೆಯಿದೆ. ಆದ್ದರದಿಂದ ಅಭ್ಯರ್ಥಿಗಳು https://jnuee.jnu.ac.in ಮೇಲೆ ಕಣ್ಣಿಡಲು ಸೂಚಿಸಲಾಗಿದೆ.

ಜೆಎನ್‌ಯು ಪಿಜಿ ಪ್ರವೇಶದ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಅಭ್ಯರ್ಥಿಗಳು ಆಗಸ್ಟ್ 17 ರಿಂದ 21 ರ ನಡುವೆ ಶುಲ್ಕ ಪಾವತಿಸಬೇಕಾಗುತ್ತದೆ. ಎರಡನೇ ಮೆರಿಟ್ ಪಟ್ಟಿಯನ್ನು ಆಗಸ್ಟ್ 25, 2023 ರಂದು ಬಿಡುಗಡೆ ಮಾಡಲಾಗುತ್ತದೆ. ಈ ದಿನಾಂಕಗಳು ಸಹ ತಾತ್ಕಾಲಿಕವಾಗಿವೆ. ಜೆಎನ್‌ಯು ಪಿಜಿ ಪ್ರವೇಶಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಪೋರ್ಟಲ್‌ಗೆ ಭೇಟಿ ನೀಡಬಹುದು.

JNU PG ಮೊದಲ ಮೆರಿಟ್ ಪಟ್ಟಿಯನ್ನು ಪರಿಶೀಲಿಸಲು ಎಲ್ಲಾ ಅಭ್ಯರ್ಥಿಗಳು ಮೊದಲು JNU ನ ಅಧಿಕೃತ ವೆಬ್‌ಸೈಟ್ jnuee.jnu.ac.in ಗೆ ಭೇಟಿ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net