

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನ್ನ ವ್ಯಾಪ್ತಿಯ ಕಚೇರಿ, ಸಂಸ್ಥೆ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮೊಬೈಲ್ ಆಧರಿತ ರಿಯಲ್ ಟೈಂ ಜಿಯೋಫೆನ್ಸ್ ಸಿಸ್ಟಂ ಮೂಲಕ ಹಾಜರಾತಿ ವ್ಯವಸ್ಥೆ ಜಾರಿಗೆ ಆದೇಶ ಹೊರಡಿಸಿದೆ.
ಈ ವ್ಯವಸ್ಥೆ ಆ.1ರಿಂದ ಜಾರಿಗೆ ಬರಲಿದ್ದು, ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಕಚೇರಿ, ಆಸ್ಪತ್ರೆಗಳಲ್ಲಿ (ವೈದ್ಯರು ಸೇರಿ) ಕಾರ್ಯನಿರ್ವಹಿಸುವ ಎಲ್ಲಾ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಮೊಬೈಲಾ ಆಧರಿಯ ರಿಯಲ್ ಟೈಂ ಜಿಯೋಫೆನ್ಸ್ ವ್ಯವಸ್ಥೆ ಮೂಲಕ ಹಾಜರಾತಿ ಹಾಕುವಂತೆ ಸೂಚಿಸಲಾಗಿದೆ.
ಈಗಾಗಲೇ ಅಳವಡಿಸಿಕೊಂಡಿರುವ ಆಧಾರ್ ಆಧರಿತ ಬಯೋಮೆಟ್ರಿಕ್ ಹಾಜರಾತಿಯಲ್ಲಿ ( ಎಇಬಿಎಎಸ್) ಸಾಕಷ್ಟು ನ್ಯೂನ್ಯತೆಗಳು ಇರುವ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧೀನ ಕಾರ್ಯದರ್ಶಿ ಸಿ. ಮಂಜೂರ್ ತಿಳಿಸಿದ್ದಾರೆ.