

ಬೆಂಗಳೂರು: ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಜಿಯೋ, ದೇಶಾದ್ಯಂತ 5G ನೆಟ್ವರ್ಕ್ ಸಂಪರ್ಕವನ್ನು ತ್ವರಿತ ಗತಿಯಲ್ಲಿ ಹೆಚ್ಚಿಸುತ್ತಿದೆ. ಜಿಯೋ, ತನ್ನ ಬಳಕೆದಾರರಿಗೆ ಆಹ್ವಾನದ ಆಧಾರದ ಮೇಲೆ 5G ಸಂಪರ್ಕವನ್ನು ನೀಡುತ್ತಿದೆ. Jio True 5G ಎಂದು ಹೆಸರಿಸಲಾದ ಟೆಲಿಕಾಂ ಆಪರೇಟರ್ ದೆಹಲಿ NCR, ಮುಂಬೈ, ವಾರಣಾಸಿ, ಅಹಮದಾಬಾದ್ ಒಳಗೊಂಡಂತೆ ಸುಮಾರು 50 ಭಾರತೀಯ ನಗರಗಳಲ್ಲಿ 5G ನೆಟ್ವರ್ಕ್ ಅನ್ನು ಪ್ರಾರಂಭಿಸಿದೆ. ಇದರಲ್ಲಿ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 13 ನಗರಗಳು ಒಳಗೊಂಡಿವೆ.
Jio 5G ಇರೋ ನಗರಗಳು:
1. ಬೆಂಗಳೂರು
2. ದೆಹಲಿ
3. ಮುಂಬೈ
4. ವಾರಣಾಸಿ
5. ಕೋಲ್ಕತ್ತಾ
6. ಹೈದರಾಬಾದ್
7. ಚೆನ್ನೈ
8. ನಾಥದ್ವಾರ
9. ಪುಣೆ
10. ಗುರುಗ್ರಾಮ
11. ನೋಯ್ಡಾ
12. ಗಾಜಿಯಾಬಾದ್
13. ಫರಿದಾಬಾದ್
ಗುಜರಾತ್ನ ಎಲ್ಲಾ 33-ಜಿಲ್ಲಾ ಕೇಂದ್ರಗಳಲ್ಲಿ ಜಿಯೋ 5ಜಿ ಸ್ಥಾಪಿಸಲಾಗಿದೆ.
ಜಿಯೋ 5G ಅನ್ನು ಹೇಗೆ ಆ್ಯಕ್ಟಿವೇಟ್ ಮಾಡುವುದು?
ನೀವು ಜಿಯೋ ಸಂಸ್ಥೆ ಕಳಿಸಿರುವ ಸ್ವಾಗತವನ್ನು ಸ್ವೀಕರಿಸಿದ್ದರೂ 5G ನೆಟ್ವರ್ಕ್ಗೆ ಸಂಪರ್ಕಿಸಲು ಸಾಧ್ಯವಾಗದಿದ್ದರೆ ಹೀಗೆ ಮಾಡಿ:
1. ನಿಮ್ಮ ಸ್ಮಾರ್ಟ್ಫೋನ್ನಲ್ಲಿ 'ಸೆಟ್ಟಿಂಗ್ಸ್' ಆಪ್ ತೆರೆಯಿರಿ.
2. 'ಮೊಬೈಲ್ ನೆಟ್ವರ್ಕ್ಸ್' ಗೆ ಹೋಗಿ.
3. ಈಗ ಜಿಯೋ ಸಿಮ್ ಆಯ್ಕೆಮಾಡಿ.
4. ಈಗ 'Primary Network' ಆಯ್ಕೆಯನ್ನು ಟ್ಯಾಪ್ ಮಾಡಿ.
5. ಈಗ 5G ನೆಟ್ವರ್ಕ್ ಪ್ರಕಾರವನ್ನು ಆಯ್ಕೆಮಾಡಿ.
ಇಷ್ಟು ಮಾಡಿದರೆ ನಿಮ್ಮ ಮೊಬೈಲ್ಗೆ 5G ಬಂದಂತೆ! (ಏಜೆನ್ಸೀಸ್)