ದೇಶ ವಿಭಜನೆಗೆ ಜಿನ್ನಾ, ಕಾಂಗ್ರೆಸ್ ಕಾರಣ

ncrt
Published on

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್​ಸಿಇಆರ್​ಟಿ) ಬಿಡುಗಡೆ ಮಾಡಿರುವ ಹೊಸ ಪಠ್ಯವೊಂದರಲ್ಲಿ ಮಹಮದ್ ಆಲಿ ಜಿನ್ನಾ, ಕಾಂಗ್ರೆಸ್ ಮತ್ತು ಅಂದಿನ ವೈಸ್​ರಾಯ್ ಲಾರ್ಡ್ ಮೌಂಟ್​ಬ್ಯಾಟನ್ ಭಾರತ ವಿಭಜನೆಯ ತ್ರಿವಳಿ ‘ತಪ್ಪಿತಸ್ಥರು’ ಎಂದು ವರ್ಣಿಸಿದೆ. ವಿಭಜನೆಯ ನಂತರ, ಕಾಶ್ಮೀರವು ಭಾರತದಲ್ಲಿ ಹಿಂದೆಂದೂ ಇರದಿದ್ದ ಹೊಸ ಸಮಸ್ಯೆಯಾಗಿ ಎದ್ದುಬಂದು ದೇಶದ ವಿದೇಶಾಂಗ ನೀತಿಗೆ ಸವಾಲನ್ನು ಸೃಷ್ಟಿಸಿತು ಎಂದು ಕೂಡ ನೂತನ ಪಠ್ಯ ಟಿಪ್ಪಣಿ ಮಾಡಿದೆ. ಕೆಲವು ದೇಶಗಳು ಪಾಕಿಸ್ತಾನಕ್ಕೆ ನೆರವು ಒದಗಿಸಿ ಕಾಶ್ಮೀರ ವಿವಾದದ ಹೆಸರಿನಲ್ಲಿ ಭಾರತದ ಮೇಲೆ ಒತ್ತಡ ಹೇರುತ್ತಿರುವುದನ್ನು ಪಠ್ಯ ಖಂಡಿಸಿದೆ.

6ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿಗೆಂದು ಎರಡು ಪ್ರತ್ಯೇಕ ಪಠ್ಯಗಳನ್ನು (ಮಾಡ್ಯೂಲ್) ಮಂಡಳಿ ಪ್ರಕಟಿಸಿದೆ. ತಪ್ಪು ಚಿಂತನೆಗಳ ಕಾರಣದಿಂದ ಭಾರತ ವಿಭಜನೆಗೊಂಡಿತು. ಹಿಂದುಗಳು ಮತ್ತು ಮುಸ್ಲಿಮರು ಎರಡು ವಿಭಿನ್ನ ಧಾರ್ವಿುಕ ಸಿದ್ಧಾಂತಗಳು, ಸಾಮಾಜಿಕ ಆಚರಣೆಗಳು ಮತ್ತು ಸಾಹಿತ್ಯಗಳಿಗೆ ಸಂಬಂಧಿಸಿದವರಾಗಿದ್ದಾರೆ ಎಂದು 1940ರಲ್ಲಿ ಲಾಹೋರ್​ನಲ್ಲಿ ನಡೆದ ಭಾರತದ ಮುಸ್ಲಿಮರ ಪಕ್ಷವಾದ ಮುಸ್ಲಿಂ ಲೀಗ್ ಸಮ್ಮೇಳನದಲ್ಲಿ ಅದರ ನಾಯಕ ಮಹಮದ್ ಆಲಿಜಿನ್ನಾ ಹೇಳಿದ್ದರೆಂದು ಪಠ್ಯದ ‘ವಿಭಜನೆಯ ತಪ್ಪಿತಸ್ಥರು’ ಎಂಬ ಅಧ್ಯಾಯದಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net