ಮನೆಗಳ ಮೇಲೆ ಜೆಟ್​ ವಿಮಾನ ಪತನ; ಭಾರಿ ಪ್ರಮಾಣದ ಬೆಂಕಿ: ಮಗು ಸೇರಿ 6 ಪ್ರಯಾಣಿಕರು ಬಲಿ! | Jet plane crashes

dk (93)
Published on

Jet plane crashes ಅಮೆರಿಕ: ಅನಾರೋಗ್ಯ ಮಗುವನ್ನು ಚಿಕಿತ್ಸೆಗೆ ಹೊತ್ತೊಯ್ಯುತ್ತಿದ್ದ ಜೆಟ್​ ವಿಮಾನೊಂದು ಇಲ್ಲಿನ ಫಿಲಡೆಲ್ಫಿ ಬಳಿ ಪತನಗೊಂಡಿದ್ದು, ಮಗುವಿನ ಜತೆಗಿದ್ದ ಕುಟುಂಬಸ್ಥರು ಸೇರಿ 6 ಜನ ಶನಿವಾರ ಮೃತಪಟ್ಟಿದ್ದಾರೆ (ಫೆ.01) ಎಂದು ವರದಿಯಾಗಿದೆ.

ವಿಮಾನವು ಶಾಪಿಂಗ್​ಮಾಲ್​ ಬಳಿ ಪತನಗೊಂಡ ಕಾರಣ ನರೆಹೊರೆಯಲ್ಲಿ ಭಾರಿ ಪ್ರಮಾಣದಲ್ಲಿ ಹಲವಾರು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ. ವೈದ್ಯಕೀಯ ಸಾರಿಗೆ ಕಂಪನಿಯ ಜೆಟ್​ ವಿಮಾನವಾಗಿದ್ದು, ಭಾರಿ ಅನಾಹುತದಿಂದ ವಿಮಾದಲಿದ್ದ ಯಾರು ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಸಾಲು ಸಾಲು ಮನೆಗಳ ಮೇಲೆ ವಿಮಾನ ಪತನಾಗಿದ್ದು, ಮನೆಯಲ್ಲಿನ ಸಾವು ನೋವುಗಳ ಬಗ್ಗೆ ಖಚಿತ ಮಾಹಿತಿ ಇಲ್ಲ. ಅನಾಹುತವಾದ ಪ್ರದೇಶಕ್ಕೆ ಕಲ್ಪಿಸುವ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್​ ಮಾಡಲಾಗಿದೆ ಎಂದು ಅಗ್ನಿಶಾಮಕದಳ ಅಧಿಕಾರಗಳು ತಿಳಿಸಿದ್ದಾರೆ.

ಈ ಕುರಿತು ಕಂಬನಿ ಮಿಡಿದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ''ಅಪಾಘಾತದಲ್ಲಿ ಮುಗ್ದ ಅತ್ಮಗಳು ಕಳೆದುಹೋಗಿವೆ''. ಘಟನಾ ಸ್ಥಳದಲ್ಲಿ ನಮ್ಮ ಅಧಿಕಾರಿ ಕಾರ್ಯೋನ್ಮುಖರಾಗಿದ್ದಾರೆ ಎಂದು ತಮ್ಮ ಎಕ್ಸ್​(ಈ ಹಿಂದಿನ ಟ್ವೀಟರ್​)ಖಾತೆಯಲ್ಲಿ ಬರೆದುಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net