

ರಿಪ್ಪನ್‌ಪೇಟೆ: ಕೋಡೂರು ಗ್ರಾಪಂನ ಹೊಸಕೆಸರೆ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಜೇನುಕಲ್ಲಮ್ಮ ದೇವಿ ವಾರ್ಷಿಕ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಾತ್ರಾ ಸಮಿತಿ ಕಾರ್ಯಾಧ್ಯಕ್ಷ ಕಲಗೋಡು ರತ್ನಾಕರ ಹೇಳಿದರು.
ಸೆ.6ರಂದು ಹಳೇ ಅಮ್ಮನಘಟ್ಟದ ಮೂಲ ಸನ್ನಿಧಿಯಲ್ಲಿ ದೇವಿಗೆ ಪೂಜೆ ಸಲ್ಲಿಸಿ, 8ರಂದು ಕಂಕಣ ಕಟ್ಟಲಾಗುವುದು. 9, 12, 16 ಹಾಗೂ 19ರಂದು ಜಾತ್ರೆ ನೆರವೇರಲಿದೆ. ಸೆ.22ರಿಂದ ಅ.2ರವರೆಗೆ ನವರಾತ್ರಿ ಉತ್ಸವ, ಅನ್ನಸಂತರ್ಪಣೆ, ವಿಜಯದಶಮಿಯಂದು ಚಂಡಿಕಾಹೋಮ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಗುಳಗುಳಿ ಶಂಕರ, ಅರಸಾಳು ಮಾಲ್ಗುಡಿ ಮ್ಯೂಜಿಯಂನ ಜತೆಗೆ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಘೋಷಿಸಿದೆ. ಆದ್ದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷ ಜಯಪ್ರಕಾಶ ಶೆಟ್ಟಿ, ಎನ್.ಪಿ.ರಾಜು, ಮುಖಂಡರಾದ ಚಂದ್ರಮೌಳಿ, ಬಂಡಿ ರಾಮಚಂದ್ರ, ಚಿದಂಬರ, ಎರಗಿ ಉಮೇಶ್, ಪಿಡಿಒ ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.