ಜೆಇಇ ಅಡ್ವಾನ್ಸ್ಡ್ ದಕ್ಷ್ ತಯಾಲಿಯಾ ಕರ್ನಾಟಕ ಟಾಪರ್

Daksh
Published on

ಬೆಂಗಳೂರು: ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಹಾಗೂ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಪ್ರವೇಶಕ್ಕಾಗಿ ನಡೆಸಿದ ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪ್ರಕಟವಾಗಿದೆ. ಬೆಂಗಳೂರಿನ ಖಾಸಗಿ ಶಾಲೆಯ ದಕ್ಷ್ ತಯಾಲಿಯಾ ಅಖಿಲ ಭಾರತೀಯ ಮಟ್ಟದಲ್ಲಿ 15ನೇ ರ‌್ಯಾಂಕ್ ಗಳಿಸುವ ಮೂಲಕ ರಾಜ್ಯದ ಟಾಪರ್ ಆಗಿದ್ದಾರೆ.

ಫಲಿತಾಂಶದಲ್ಲಿ ಹಲವು ವಿದ್ಯಾರ್ಥಿಗಳು ಟಾಪ್ 100 ರ‌್ಯಾಂಕ್‌ನ್ಲಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೆಯೇ ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ಮೊದಲ ರ‌್ಯಾಂಕ್ ಗಳಿಸಿದ್ದ ಭವೇಶ್ ಜಯಂತಿ 35ನೇ ರ‌್ಯಾಂಕ್ ಪಡೆದಿದ್ದಾರೆ. ಜೆಇಇ ಮೇನ್ಸ್ 1 ಮತ್ತು 2ರಲ್ಲಿಯೂ ರಾಜ್ಯಕ್ಕೆ ಟಾಪರ್ ಆಗಿದ್ದ ಕುಶಾಗ್ರ ಗುಪ್ತಾ 49ನೇ ರ‌್ಯಾಂಕ್ ಪಡೆದಿದ್ದಾರೆ. ಚಿನ್ಮಯ ಶಂಕರ ಶಾಸಿ (57), ಚೈತನ್ಯ ಪಿ. ಶಿವಂ (88) ಅನಿರುದ್ಧ್ ಶರ್ಮಾ (142), ರಿಷಭ್ ಪಾಂಡೆ (143), ಸಂಕರ್ಷಣ ಬಹದ್ದೂರ್ ರಘುಬನ್ಶಿ (164), ಶೌರ್ಯ ರಥಿ (171), ರಾಘವ್ ಜಗ್ಗಿ (181) ಸ್ಥಾನ ಪಡೆದಿರುವ ಇತರೆ ವಿದ್ಯಾರ್ಥಿಗಳಾಗಿದ್ದಾರೆ.

2025ರಲ್ಲಿ ನಡೆಸಿದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ 1,80,422 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 54,378 ಮಂದಿ ಅರ್ಹತೆ ಪಡೆದಿದ್ದಾರೆ. ಇದರಲ್ಲಿ 9,404 ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ.

10ನೇ ತರಗತಿಯಲ್ಲಿದ್ದ ವೇಳೆಯಲ್ಲಿಯೇ ಜೆಇಇಗೆ ಪ್ರಾಕ್ಟೀಸ್ ಮಾಡುತ್ತಿದ್ದೆ. ಸತತ 3 ವರ್ಷಗಳ ತರಬೇತಿ ಫಲವಾಗಿ ಈ ರ‌್ಯಾಂಕ್ ಸಿಕ್ಕಿದೆ. ತಂದೆ- ತಾಯಿ ಕೂಡ ಇಂಜಿನಿಯರ್ ಆಗಿರುವುದರಿಂದ ನಾನು ಸಹ ಇಂಜಿನಿಯರ್ ಆಗಬೇಕೆಂಬ ಕನಸಿನೊಂದಿಗೆ ವ್ಯಾಸಂಗ ಮಾಡಿದೆ. ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ಓದಬೇಕೆಂನ ಗುರಿ ಇದೆ. ಬಿಡುವಿನ ಸಮಯದಲ್ಲಿ ಕ್ರಿಕೆಟ್ ಆಡುವುದು ನನ್ನ ಹವ್ಯಾಸವಾಗಿದೆ. - ದಕ್ಷ್ ತಯಾಲಿಯಾ, ರಾಜ್ಯದ ಟಾಪರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net