ಎನ್​ಡಿಎ ಮೈತ್ರಿಯಲ್ಲಿ ಕಂಪನ..ಜಾತಿ ಗಣತಿಗಾಗಿ 'ಇಂಡಿಯಾ' ದತ್ತ ಜೆಡಿಯು ಒಲವು!

Nithish Kumar
Published on

ನವದೆಹಲಿ : ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಜಾತಿ ಗಣತಿಗೆ ಬೇಡಿಕೆ ಹೆಚ್ಚಾಗುತ್ತಿರುವಾಗಲೇ ಆಡಳಿತಾರೂಢ ಎನ್‌ಡಿಎಯಲ್ಲಿ ಈ ವಿಚಾರ ಸಂಚಲನ ಮೂಡಿಸಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯುಗೆ ಜಾತಿ ಲೆಕ್ಕಾಚಾರದ ವಿಚಾರವನ್ನು ಬಿಜೆಪಿ ಪ್ರಸ್ತಾಪಿಸದಿರುವುದು ಅಸಮಾಧಾನ ತಂದಿದೆ.

ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಮತ್ತು ಅರ್ಹರಿಗೆ ಕಲ್ಯಾಣ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ 'ಇಂಡಿಯಾ' ಒಕ್ಕೂಟದ ನಾಯಕರು ಒತ್ತಾಯಿಸುತ್ತಿದ್ದಾರೆ. ಈಗ ಜೆಡಿಯು ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿದೆ. ಗುರುವಾರ ಜೆಡಿಯು ಒಬಿಸಿಗಳ ಕಲ್ಯಾಣಕ್ಕಾಗಿ ಸಂಸದೀಯ ಸಮಿತಿಯನ್ನು ಸೇರಿದೆ.

ಡಿಎಂಕೆ ಸದಸ್ಯ ಟಿ.ಆರ್.ಬಾಲು ಮತ್ತು ಬಿಜೆಪಿ ಸದಸ್ಯ ಗಣೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಮೊದಲ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಮಾಣಿಕ್ಕಂ ಠಾಗೋರ್ ಅವರು ಜಾತಿ ಗಣತಿಯನ್ನು ಅಜೆಂಡಾದಲ್ಲಿ ಮೊದಲ ವಿಷಯವಾಗಿ ಸೇರಿಸಲು ಪ್ರಸ್ತಾಪಿಸಿದರು.

ಇದಕ್ಕೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯ ಕಲ್ಯಾಣ್ ಬ್ಯಾನರ್ಜಿ ಬೆಂಬಲಿಸಿದರು. ಈ ಪ್ರಸ್ತಾವನೆಗೆ ಜೆಡಿಯು ಸದಸ್ಯ ಗಿರ್ಧಾರಿ ಯಾದವ್ ಬೆಂಬಲ ಸೂಚಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ಜಾತಿ ಗಣತಿ ವಿಚಾರವಾಗಿ ಸಮಿತಿ ಚರ್ಚೆ ನಡೆಸಬೇಕಾದ ಅಗತ್ಯವನ್ನು ಬ್ಯಾನರ್ಜಿ ಒತ್ತಿ ಹೇಳಿದ್ದು, ಸಮಿತಿಯು ಔಪಚಾರಿಕವಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಒತ್ತಾಯಿಸಬೇಕಿದೆ ಎಂದು ಸಲಹೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net