ಮೇಡಿಹಾಳ ಎಂಪಿಸಿಎಸ್​ನಲ್ಲಿ ಜೆಡಿಎಸ್​ ಜಯಭೇರಿ

klr mpcs
ಕೋಲಾರ ತಾಲೂಕು ಮೇಡಿಹಾಳ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ಜೆಡಿಎಸ್​ ನಿರ್ದೇಶಕರನ್ನು ಜೆಡಿಎಸ್​ ಮುಖಂಡ ಸಿಎಂಆರ್​.ಶ್ರೀನಾಥ್​ ತಮ್ಮ ನಿವಾಸದಬಳಿ ಸನ್ಮಾನಿಸಿದರು.
Published on

ಕೋಲಾರ: ತಾಲೂಕಿನ ಮೇಡಿಹಾಳ ಹಾಲು ಉತ್ಪಾದಕರ ಸಹಕಾರ ಸಂಘದ 11 ನಿರ್ದೇಶಕ ಸ್ಥಾನಗಳಿಗೆ ಸೋಮವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಜೆಡಿಎಸ್​ ಬೆಂಬಲಿಗರು ಜಯಭೇರಿ ಬಾರಿಸುವ ಮೂಲಕ ಜಿಲ್ಲೆಯ ಸಹಕಾರಿ ಸಂಸ್ಥೆಗಳನ್ನು ನಾಶಪಡಿಸುವ ಕಾಂಗ್ರೆಸ್​ನ ರೈತ ವಿರೋಧಿ ನೀತಿಗೆ ಜನತೆ ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್​ ಮುಖಂಡ ಸಿಎಂಆರ್​.ಶ್ರೀನಾಥ್​ ಹೇಳಿದರು.

ಮೇಡಿಹಾಳ ಎಂಪಿಸಿಎಸ್​ಗೆ ಆಯ್ಕೆಯಾದ ನಿರ್ದೇಶಕರನ್ನು ತಮ್ಮ ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿ, ಒಟ್ಟು 12 ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಮೊದಲೇ ಅವಿರೋಧ ಆಯ್ಕೆ ನಡೆದಿತ್ತು. 11 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 10 ರಲ್ಲಿ ಜೆಡಿಎಸ್​ ಗೆಲುವು ಸಾಧಿಸಿದೆ, ಒಂದು ಮತದ ಅಂತರದಿಂದ ಒಂದು ಸ್ಥಾನ ಕಾಂಗ್ರೆಸ್​ ಪಾಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ರೈತರು, ಮಹಿಳೆಯರ ಜೀವಾಳವಾಗಿರುವ ಕೋಲಾರ ಹಾಲು ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕಿಗೆ ಸಕಾಲದಲ್ಲಿ ಚುನಾವಣೆ ನಡೆಸದೇ ಹಾಗೂ ಹಾಲು ಉತ್ಪಾದಕರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹಧನ ಬಿಡುಗಡೆಮಾಡದೇ ಅನ್ನದಾತರಿಗೆ ರಾಜ್ಯದ ಕಾಂಗ್ರೆಸ್​ ಸರ್ಕಾರ ಮಹಾದ್ರೋಹ ಬಗೆದಿದೆ ಎಂದು ಆರೋಪಿಸಿದರು.

ಹಾಲು ಉತ್ಪಾದಕರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡಿಲ್ಲ, ಕೋಚಿಮುಲ್​ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್​ನ ಶಾಸಕರೇ ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದರೂ ಅದರ ವಿರುದ್ದ ತನಿಖೆ ನಡೆಸುವ ಪ್ರಯತ್ನವೂ ನಡೆದಿಲ್ಲ ಎಂದು ಕಿಡಿಕಾರಿದರು.

ಎಪಿಎಂಸಿಗೆ ಜಾಗ ನೀಡುವ ಆಲೋಚನೆಯೂ ಇಲ್ಲ, ಕೆಸಿ ವ್ಯಾಲಿ 3ನೇ ಹಂತದ ಶುದ್ದೀಕರಣದ ಪ್ರಸ್ತಾಪವಿಲ್ಲ, ರಿಂಗ್​ ರೋಡ್​ ಕಾಮಗಾರಿಯ ನೆನಪು ಸರ್ಕಾರಕ್ಕೆ ಇಲ್ಲ, ಎತ್ತಿನಹೊಳೆ ನೀರು ಕೋಲಾರ ಜಿಲ್ಲೆಗೆ ಹರಿಸುವ ಪ್ರಯತ್ನವೂ ಬಜೆಟ್​ನಲ್ಲಿ ಆಗಿಲ್ಲ, ಇಷ್ಟಿದ್ದರೂ ಜಿಲ್ಲೆಯ ಕಾಂಗ್ರೆಸ್​ ಶಾಸಕರು ರಾಜ್ಯ ಸರ್ಕಾರ ಜಿಲ್ಲೆಗೆ ಕೊಡುಗೆ ನೀಡಿದೆ ಎಂದು ವಿಜಯೋತ್ಸವ ಆಚರಿಸಿದ್ದು, ಯಾವ ಪುರುಷಾರ್ಥಕ್ಕಾಗಿ ಎಂದು ವ್ಯಂಗ್ಯವಾಡಿದರು.

ನೂತನ ನಿರ್ದೇಶಕರಿಗೆ ಅಭಿನಂದನೆ

ಮೇಡಿಹಾಳ ಎಂಪಿಸಿಎಸ್​ಗೆ ಆಯ್ಕೆಯಾದ ಜೆಡಿಎಸ್​ ಬೆಂಬಲಿತ ನಿರ್ದೇಶಕರಾದ ಪಿ.ಸುರೇಶ, ಬಿ.ಎಂ.ಮುನಿಶಾಮಿರೆಡ್ಡಿ, ಎಸ್​.ಎಂ ಮುನಿರೆಡ್ಡಿ, ಎನ್​.ಶ್ರೀನಿವಾಸ್​, ಎಂ.ನಾರಾಯಣಸ್ವಾಮಿ, ವಿ.ನಾರಾಯಣಸ್ವಾಮಿ, ಎಂ.ಎಸ್​.ವೆಂಕಟರಾಮ್​, ಲಕ್ಷಿ$್ಮದೇವಮ್ಮ, ರಾಧಮ್ಮ, ಸುಜಾತಾ ಅವರನ್ನು ಅಭಿನಂದಿಸಿದರು.

ಜೆಡಿಎಸ್​ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್​, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್​, ಮುಖಂಡರಾದ ಚೌಡರೆಡ್ಡಿ, ಗ್ರಾಪಂ ಸದಸ್ಯ ಕುಮಾರ್​, ಮುಖಂಡರಾದ ಎಂ.ಬಿ.ನಾರಾಯಣಸ್ವಾಮಿ, ಎಂ.ಎನ್​.ಗೋಪಾಲ್ ಗೌಡ​, ಎಂಪಿಸಿಎಸ್​ ಮಾಜಿ ಅಧ್ಯಕ್ಷ ಎ.ವಿ.ಚೌಡರೆಡ್ಡಿ, ಎಂ.ಎನ್​.ಗೋಪಾಲ್​, ಮುನಿಯಪ್ಪ, ಚಿಕ್ಕ ಬಚ್ಚಪ್ಪನವರ ವೆಂಕಟೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net