

ಬೆಂಗಳೂರು: ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಮತ್ತು ಇತರ ಸಂಘಟನೆಗಳು ಸೋಮವಾರ(ಸೆ.28) ರಾಜ್ಯ ಬಂದ್ಗೆ ಕರೆ ನೀಡಿವೆ.
ಸೋಮವಾರ ನಡೆಯುವ ರಾಜ್ಯ ಬಂದ್ಗೆ ಜೆಡಿಎಸ್ ಕೂಡ ಸಾಥ್ ನೀಡಲಿದೆ. ಈ ಬಗ್ಗೆ ಸ್ವತಃ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ಸ್ಪಷ್ಟಪಡಿಸಿದ್ದಾರೆ. ''ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಬಂದ್ಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ'' ಎಂದಿದ್ದಾರೆ. ಇದನ್ನೂ ಓದಿರಿ ಸೆ.28ರಂದು ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಬಂದ್ ನಡೆಸಲು ತೀರ್ಮಾನ
ಕಾಂಗ್ರೆಸ್ ಕೂಡ ಈ ಬಂದ್ಗೆ ಬೆಂಬಲ ವ್ಯಕ್ತಪಡಿಸಿದೆ. ಈಗಾಗಲೇ ರೈತರ ಪ್ರತಿಭಟನೆಯ ತೀವ್ರತೆ ಅರಿತ ಪೊಲೀಸರು ಸಿಲಿಕಾನ್ ಸಿಟಿ ಸುತ್ತಮುತ್ತ ವಿಗಿ ಬಂದೋಬಸ್ತ್ ಮಾಡುತ್ತಿದ್ದಾರೆ. 1,500ಕ್ಕೂ ಹೆಚ್ಚು ಸಿವಿಲ್ ಹಾಗೂ ಸಂಚಾರಿ ಪೊಲೀಸರು, 2,000ಕ್ಕೂ ಹೆಚ್ಚು ಕೆಎಸ್ಆರ್ಪಿ ಹಾಗೂ ಸಿಎಆರ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಟೌನ್ ಹಾಲ್, ಮೆಜೆಸ್ಟಿಕ್, ಫ್ರೀಡಂಪಾರ್ಕ್, ತುಮಕೂರು ರಸ್ತೆ, ಮಾಗಡಿ ರಸ್ತೆ, ವಿಧಾನಸೌಧ, ಮೈಸೂರ್ ರೋಡ್, ಹೊಸೂರು ರಸ್ತೆ ಹಾಗೂ ದೇವನಹಳ್ಳಿ ರಸ್ತೆಗಳಲ್ಲಿ ಪೊಲೀಸ್ ಕಣ್ಗಾವಲಿದೆ.