ಬಿಜೆಪಿ-ಕಾಂಗ್ರೆಸ್​ನ ಯಾತ್ರೆ ನಂತರ ನಾಳೆಯಿಂದ ಜೆಡಿಎಸ್​ ಪಂಚರತ್ನ ಯಾತ್ರೆ…

HD Devegowda
Published on

ಕೋಲಾರ: ಕಾಂಗ್ರೆಸ್​ನ ಭಾರತ್​ ಜೋಡೊ ಯಾತ್ರೆ ರಾಜ್ಯದಲ್ಲಿ ಬಂದಾಗ ಭಾರಿ ಸುದ್ದಿ ಮಾಡಿತ್ತು. ಇದರ ಪರಿಣಾಮವಾಗಿ ಬಿಜೆಪಿಯೂ ರಾಜ್ಯದಲ್ಲಿ ಜನಸಂಕಲ್ಪ ಯಾತ್ರೆ ಶುರು ಮಾಡಿತ್ತು. ಜೆಡಿಎಸ್,​ ಇತರ ಪಕ್ಷಗಳ ಯಾತ್ರೆಗಳು ಮುಗಿದ ನಂತರ ತನ್ನ ಪಂಚರತ್ನ ಯಾತ್ರೆಯನ್ನು ನಾಳೆಯಿಂದ ಶುರು ಮಾಡಲಿದೆ. ನಾಳೆಯಿಂದ‌ ಕೋಲಾರದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಪ್ರಾರಂಭವಾಗಲಿದ್ದು ಇದು ಮೊದಲನೇ ಹಂತದ ಕಾರ್ಯಕ್ರಮ ಆಗಿರಲಿದೆ.

ನ.18 ರಿಂದ‌ ನ.22 ರವರೆಗೆ ಕೋಲಾರದಲ್ಲಿ ಪಂಚರತ್ನ ಕಾರ್ಯಕ್ರಮ ನಡೆಯಲಿದ್ದು ನಾಳೆ ಬೆಳಗ್ಗೆ ಮುಳಬಾಗಲು ಹೊರವಲಯದ ಬಾಲಾಜಿ ಹೋಟೆಲ್‌ ಬಳಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಜನರು ಬರಲಿದ್ದಾರೆ.

ಬೃಹತ್ ಸಮಾವೇಶದ ನಂತರ ಮುಳಬಾಗಿಲು ತಾಲೂಕಿನ ಬಟ್ಲಬಾವನಹಳ್ಳಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವ್ಯಾಸ್ತವ ಮಾಡಲಿದ್ದಾರೆ. ನ.18ರಂದು ಮುಳಬಾಗಿಲು, ನ.19ರಂದು ಬಂಗಾರಪೇಟೆ, ನ.20ರಂದು ಮಾಲೂರು, ನ.21ರಂದು ಕೋಲಾರ, ನ.22ರಂದು ಶ್ರೀನಿವಾಸಪುರದಲ್ಲಿ ಪಂಚರತ್ನ ಕಾರ್ಯಕ್ರಮ ನಡೆಯಲಿದ್ದು ನಾಳೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಇಬ್ರಾಹಿಂ, ‌ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಮಳೆಯ ಕಾರಣದಿಂದಾಗಿ ಮುಂದೂಡಲಾಗಿದ್ದ ಜೆಡಿಎಸ್ ಪಕ್ಷದ ಪಂಚರತ್ನಯಾತ್ರೆ ನಾಳೆಯಿಂದ ಮತ್ತೆ ಆರಂಭವಾಗಲಿದೆ. ನ.1ರಂದು ಮಾಜಿ ಪ್ರಧಾನಿ ದೇವೇಗೌಡರು ಕೋಲಾರದ ಮುಳಬಾಗಿಲು ತಾಲೂಕಿನ ಕುರುಡುಮಲೆಯಲ್ಲಿ ಚಾಲನೆ ನೀಡಿದ್ದರು. ಐದು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ಗ್ರಾಮ ವಾಸ್ತವ್ಯ ಮಾಡಬೇಕಿತ್ತು. ಆದರೆ ಭಾರೀ ಮಳೆಯ ಕಾರಣದಿಂದಾಗಿ ಮುಂದೂಡಲಾಗಿತ್ತು.

ಇದೀಗ ನಾಳೆ ಮುಳಬಾಗಿಲಿನಲ್ಲಿ ಪಂಚರತ್ನ ಯಾತ್ರೆಗೆ ಮತ್ತೆ ಮರುಚಾಲನೆ ನೀಡಲಿದ್ದು, ಬೃಹತ್ ಸಭೆಗೆ ಸಿದ್ದತೆ ಮಾಡಲಾಗಿದೆ. ಜೆಡಿಎಸ್​ನ ವರಿಷ್ಟ ಹೆಚ್​ಡಿ ದೇವೆಗೌಡರು, ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ, ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಸೇರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net