ಜನರೊಂದಿಗೆ ಜನತಾದಳ ಅಭಿಯಾನ ಜಿಲ್ಲೆಯಲ್ಲಿನ ಅಸಮಾಧಾನ ತಣಿಸಲು ಗಮನ

JDS-party-symbol
Published on

ಬೆಂಗಳೂರು:

ರಾಜ್ಯದಾದ್ಯಂತ ಜನರೊಂದಿಗೆ ಜನತಾದಳ ಅಭಿಯಾನ ನಡೆಸುತ್ತಿರುವ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಯಾ ಜಿಲ್ಲೆಯೊಳಗೆ ಪಕ್ಷದೊಳಗಿರುವ ಅಸಮಾಧಾನಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಲಹೆ ನೀಡಿದ್ದಾರೆ.

ನಾನಾ ಕಾರಣಕ್ಕಾಗಿ ಹಿರಿಯ ನಾಯಕರು ಮತ್ತು ಕಾರ್ಯಕರ್ತರುಗಳ ನಡುವೆ ವ್ಯತ್ಯಾಸಗಳು ಅಲ್ಲಲ್ಲಿ ಇರುವುದು ನನ್ನ ಗಮನಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ಜಿಲ್ಲಾ ಪ್ರವಾಸ ಮಾಡುವ ಸಂದರ್ಭದಲ್ಲಿಯೇ ಈ ಬಗ್ಗೆ ಗಮನ ನೀಡಿ ಆದಷ್ಟು ಪರಿಹಾರ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ನಿಖಿಲ್ ಪ್ರವಾಸ ಮಾಡಲು ಯೋಜಿಸಿದ್ದಾರೆ.

ಪಕ್ಷದ ಕಾರ್ಯಕರ್ತರುಗಳ ಅಭಿಪ್ರಾಯಕ್ಕೆ ಮೊದಲು ಮನ್ನಣೆ ನೀಡಬೇಕು. ನಂತರ ಪಕ್ಷದ ಮುಖಂಡರ ಮಾತುಗಳನ್ನು ಆಲಿಸಿ ಬಳಿಕ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವ ಸಲಹೆಗಳನ್ನು ವರಿಷ್ಠರು ನಿಖಿಲ್‌ಗೆ ತಿಳಿಸಿದ್ದಾರೆ.

ಶಾಸಕರು ಮತ್ತು ಮಾಜಿ ಶಾಸಕರುಗಳು ಇರುವ ಕ್ಷೇತ್ರಗಳಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅಲ್ಲಿ ಯಾವುದೇ ನಿರ್ಣಯ ಪ್ರಕಟ ಮಾಡದೆ, ವರಿಷ್ಠರ ಜೊತೆಯಲ್ಲಿ ಸಮಾಲೋಚಿಸಿ ನಂತರ ನಿರ್ಧಾರ ಮಾಡಬೇಕು ಎಂದು ನಿಖಿಲ್‌ಗೆ ಸಲಹೆ ಕೊಡಲಾಗಿದೆ. ಈ ಎಲ್ಲಾ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡೆ ಜನರೊಂದಿಗೆ ಜನತಾದಳ ಕಾರ್ಯಕ್ರಮವನ್ನು ಮುನ್ನೆಡೆಸಲು ನಿಖಿಲ್ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net