ಜೆಡಿಎಸ್ ತೊರೆದು ಕಾಂಗ್ರೆಸ್​​ನತ್ತ ವೈ.ಎಸ್​.ವಿ ದತ್ತ

YSV Datta
Published on

ಬೆಂಗಳೂರು: ಮಾಜಿ ಶಾಸಕ ವೈ.ಎಸ್​.ವಿ ದತ್ತ ಜೆಡಿಎಸ್​​ ಪಕ್ಷದಿಂದ ಹೊರಬಂದಿದ್ದು, ಶೀಘ್ರವೇ ಕಾಂಗ್ರೆಸ್​​ ಸೇರ್ಪಡೆಯಾಗುವುದಾಗಿ ತಿಳಿಸಿರುವುದು ವರದಿಯಾಗಿದೆ.

ಸದ್ಯದಲ್ಲೇ ಅಧಿಕೃತವಾಗಿ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತೇನೆ. ಈ ಬಗ್ಗೆ ಹಿರಿಯ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚಿಸಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆಯವರನ್ನು ಇನ್ನೂ ಭೇಟಿಯಾಗಿಲ್ಲ ಎಂದು ವೈ.ಎಸ್​.ವಿ ದತ್ತ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

2023ರ ಚುನಾವಣೆ ನನ್ನ ಕೊನೆಯ ವಿಧಾನಸಭಾ ಚುನಾವಣೆ. ನನ್ನ ರಾಜಕೀಯ ನಿವೃತ್ತಿಯನ್ನು ಜನರಿಗೆ ಬಿಟ್ಟಿದ್ದೇನೆ. ನನ್ನ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಕುಂಠಿತವಾಗುತ್ತಿದೆ. ಇದರಿಂದ ನನ್ನನ್ನು ನಂಬಿ ಬಂದಿರುವ ಕಾರ್ಯಕರ್ತರಿಗೆ ಭವಿಷ್ಯದಲ್ಲಿ ಸಮಸ್ಯೆಯಾಗಬಹುದು. ಹೀಗಾಗಿ ಕಾರ್ಯಕರ್ತರು ಅಂತಂತ್ರರಾಗದೆ, ನೆಲೆಕೊಡಿಸಲು ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ವೈಎಸ್​ವಿ ದತ್ತ ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net