ಭಾರತೀಯ ಸಾಹಿತ್ಯ ಕೃತಿಗೆ ಸಿಗಲಿದೆ 25 ಲಕ್ಷ ರೂ. ಬಹುಮಾನ, ಶುರುವಾಗಿದೆ ಪುಸ್ತಕದ ಆಯ್ಕೆ ಪ್ರಕ್ರಿಯೆ

JCB award jury2
Published on

ನವದೆಹಲಿ: ಭಾರತದಲ್ಲಿ ಸಾಹಿತ್ಯ ಕೃತಿಗೆ ಅತಿ ಹೆಚ್ಚು ಮೊತ್ತದ ಬಹುಮಾನ ನೀಡಲಾಗುವ 'ಜೆಸಿಬಿ ಪ್ರೈಜ್​ ಫಾರ್​ ಲಿಟರೇಟರ್​' ಪ್ರಶಸ್ತಿಗೆ ತೀರ್ಪುಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಈ ಪ್ರಶಸ್ತಿಗೆ ಆಯ್ಕೆಯಾಗುವ ಕೃತಿಗೆ ಬರೋಬ್ಬರಿ 25 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಒಂದು ವೇಳೆ ಆ ಕೃತಿ ಅನುವಾದವಾಗಿದ್ದರೆ, ಭಾಷಾಂತಕಾರರಿಗೆ ಪ್ರತ್ಯೇಕವಾಗಿ 10 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಇನ್ನು ವಿಶೇಷವೆಂದರೆ, ಅಂತಿಮ ಸುತ್ತಿಗೆ ಆಯ್ಕೆಯಾಗುವ ಎಲ್ಲ ಕೃತಿಗಳಿಗೂ ಒಂದು ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಈ ವಿಭಾಗದಲ್ಲೂ ಅನುವಾದಿತ ಕೃತಿಗಳಿದ್ದರೆ ಅವರು ಕೂಡ 50,000 ರೂ.ಗಳನ್ನು ಪಡೆಯುತ್ತಾರೆ.

ಕಳೆದ ಬಾರಿ ಭಾರತೀಯ ಮೂಲದ ಅಮೆರಿಕ ನಿವಾಸಿ ಮಾಧುರಿ ವಿಜಯ್​ ಅವರ "ದಿ ಫಾರ್​ ಫೀಲ್ಡ್​" ಕೃತಿ ಪ್ರಶಸ್ತಿಗೆ ಭಾಜನವಾಗಿತ್ತು.

2020ರ ಸಾಹಿತ್ಯ ಕೃತಿಯ ಆಯ್ಕೆಗೆ ಜೆಸಿಬಿ ಪ್ರತಿಷ್ಠಾನವು ತೀರ್ಪುಗಾರರ ಮಂಡಳಿಯನ್ನು ಆಯ್ಕೆ ಮಾಡಲಾಗಿದೆ. ಸಂಗೀತ, ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷೆ ಹಾಗೂ ಭರತನಾಟ್ಯ ಕಲಾವಿದೆ ಲೀಲಾ ಸ್ಯಾಮ್ಸನ್​ ಮಂಡಳಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕ ತೇಜಸ್ವಿ ನಿರಂಜನ್​, ಟಾಟಾ ಟ್ರಸ್ಟ್​ನ ಕಲೆ ಮತ್ತು ಸಂಸ್ಕೃತಿ ವಿಭಾಗದ ಮುಖ್ಯಸ್ಥೆ ದೀಪಿಕಾ ಸೊರಾಬ್ಜಿ, ಲೇಖಕ ಹಾಗೂ ಅನುವಾದಕಿ ಅರುಣಿ ಕಶ್ಯಪ್​, ನಿರ್ದೇಶಕ ಹಾಗೂ ಸಂಭಾಷಣೆಕಾರ ರಾಮು ರಾಮನಾಥನ್​ ಆಯ್ಕೆ ಮಂಡಳಿಯಲ್ಲಿದ್ದಾರೆ.

ಆಯ್ಕೆ ಮಂಡಳಿಯು ಸೆಪ್ಟಂಬರ್​ 1ರಂದು ಕೃತಿಗಳ ಸುಧೀರ್ಘ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಬಳಿಕ ಪ್ರಶಸ್ತಿ ಸುತ್ತಿಗೆ ಐದು ಕೃತಿಗಳನ್ನು ಪರಿಗಣಿಸಲಾಗುತ್ತದೆ. ಆ ಪಟ್ಟಿಯನ್ನು ಸೆಪ್ಟಂಬರ್​ 25ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net