ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಸಾಮಾನ್ಯ ಜನರಲ್ಲೂ ಸುರಕ್ಷತಾ ಭಾವನೆ ಇತ್ತು

Jayachamarajendra Wodeyar jayanthi
Published on

ಮೈಸೂರು: ಮೈಸೂರು ಮಹಾರಾಜರ ಆಳ್ವಿಕೆಯು ಸಾಮಾನ್ಯ ಜನರಲ್ಲೂ ಸುರಕ್ಷತಾ ಭಾವನೆ ಮೂಡಿಸಿತ್ತು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಹೇಳಿದರು.

ಶ್ರೀ ಕೃಷ್ಣ ಗಾನಸಭಾ ವತಿಯಿಂದ ಗೋಕುಲಂ 3ನೇ ಹಂತದ ಆಳ್ವಾರ್ ಕಲಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಯಚಾಮರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಯಚಾಮರಾಜ ಒಡೆಯರ್ ಮೃತಪಟ್ಟ ಸಂದರ್ಭ ಜನರು ಸಾಕಷ್ಟು ಮರುಗಿ ದ್ದರು. ‘ಮಹಾರಾಜರು ಹೊರಟು ಹೋದರು, ನಮಗಿನ್ನು ಯಾರು ಗತಿ?’ ಎಂದು ಜನರು ಗೋಳಾಡಿಕೊಳ್ಳುತ್ತಿದ್ದರು. ಜನರು ಮೈಸೂರು ಮಹಾರಾಜರನ್ನು ದೈವ ಸ್ವರೂಪಿ ಎಂದು ಭಾವಿಸುತ್ತಿದ್ದರು ಎಂದು ಸ್ಮರಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಶಿಕ್ಷಣದಿಂದ ತಳ ಸಮುದಾಯದ ಮಕ್ಕಳು ಸಹ ಶಿಕ್ಷಣ ಪಡೆಯುವಂತಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಮೃತಪಟ್ಟು ಎಂಟು ದಶಕಗಳು ಕಳೆದರೂ ಜನರು ಇಂದಿಗೂ ಅವರನ್ನು ನೆನೆಯುತ್ತಾರೆ. ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಲ್ವಡಿ ಜಾರಿಗೆ ತಂದರು. ಸಂವಿಧಾನ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ನೀಡಿತು. ಆದರೆ, ರಾಜಪ್ರಭುತ್ವದಲ್ಲಿಯೇ ನಾಲ್ವಡಿ ಅವರು ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತೆ ಮಾಡಿದರು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net