ಅಮಿತಾಭ್​​ ಹೆಸರಿಟ್ಟು ನನ್ನನ್ನು ಕರೆಯಬೇಡಿ ಎಂದಿದ್ದೇಕೆ ಜಯಾ ಬಚ್ಚನ್​​​

Untitled-design-2024-07-29T214040.299-1
Published on

ನವದೆಹಲಿ: ರಾಜ್ಯಸಭೆ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಜಯಾ ಬಚ್ಚನ್ ಅವರನ್ನು ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು, ಜಯಾ ಅಮಿತಾಭ್ ಬಚ್ಚನ್ ಎಂದು ಉಲ್ಲೇಖಿಸಿದ್ದಕ್ಕೆ ನಟಿ ಜಯಾ ಬಚ್ಚನ್ ಆಕ್ಷೇಪ ವ್ಯಕ್ತಪಡಿಸಿದರು.

ನನ್ನನ್ನು ಜಯಾ ಬಚ್ಚನ್ ಎಂದು ಕ ರೆದರೆ ಸಾಕು, ಅಮಿತಾಭ್​​​ ಬಚ್ಚನ್ ಎಂದು ಕರೆಯುವ ಅಗತ್ಯವಿಲ್ಲ ಎಂದಿದ್ದಾರೆ. ಜಯಾ ಬಚ್ಚನ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಉಪ ಸಭಾಪತಿ ಹರಿವಂಶ್ ನಾರಾಯಣ್ ಅವರು ಜಯಾ ಅಮಿತಾಭ್​​​ ಬಚ್ಚನ್ ಎಂದು ಅಧಿಕೃತವಾಗಿ ಪೂರ್ಣ ಹೆಸರನ್ನು ನೋಂದಾಯಿಸಿರುವ ಕಾರಣ ಕರೆಯಬೇಕಾಯಿತು ಎಂದರು.

ಅದಕ್ಕೆ ಜಯಾ ಬಚ್ಚನ್​​​ ಮಹಿಳೆಯರು ತಮ್ಮ ಗಂಡನ ಹೆಸರಿನಿಂದ ಗುರುತಿಸಲ್ಪಡಬೇಕು ಎಂಬ ಕೆಲವು ಹೊಸ ಮಾರ್ಗಗಳು ಬರುತ್ತಿವೆ. ಗಂಡನ ಹೆಸರಿನಿಂದ ಮಾತ್ರ ಮಹಿಳೆಯರು ಗುರುತಿಸಿಕೊಳ್ಳುತ್ತಾರೆಯೇ.. ಅವರು ಯಾವುದೇ ಸಾಧನೆ ಮಾಡಿಲ್ಲವೆ. ಅವರಿಗೆ ಸ್ವಂತ ಅಸ್ತಿತ್ವ ಇಲ್ಲವೇ ಎಂದು ಪ್ರಶ್ನಿಸಿದರು. ಅದೂ ಅಲ್ಲದೆ ತಾನು ಯಾವುದೇ ಯಶಸ್ಸು ಸಾಧಿಸಿಲ್ಲವೇ ಎಂದು ಜಯಾ ಬಚ್ಚನ್​​ ಸಿಡಿಮಿಡಿಗೊಂಡರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net