

ಬೆಂಗಳೂರು: ಬಾಲಿವುಡ್ ಚಿತ್ರ 'ಜವಾನ್' ಟ್ರೇಲರ್ ನಿರಂತರವಾಗಿ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಶಾರುಖ್ ಖಾನ್ ಅಭಿನಯದ ಈ ಚಿತ್ರದ ಟ್ರೇಲರ್‌ನಲ್ಲಿ ಪೂರ್ಣ ಪ್ರಮಾಣದ ಆಕ್ಷನ್ ಕಾಣಿಸುತ್ತದೆ. ಟ್ರೇಲರ್ ಅನ್ನು ತಯಾರಕರು ಗುರುವಾರ ಬಿಡುಗಡೆ ಮಾಡಿದ್ದಾರೆ. ಈ ಟ್ರೇಲರ್ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಎಷ್ಟು ಮಿಲಿಯನ್ ವೀಕ್ಷಣೆ ಕಂಡಿದೆ ಗೊತ್ತಾ? ಮುಂದೆ ಓದಿ...
ಎಲ್ಲಾ ಭಾಷೆಗಳಲ್ಲಿ 37 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ
ಆಗಸ್ಟ್ 31 ರಂದು, 'ಜವಾನ್' ನಿರ್ಮಾಪಕರು ಯೂಟ್ಯೂಬ್‌ನಲ್ಲಿ ಚಿತ್ರದ ಟ್ರೇಲರ್ ಅನ್ನು ವಿವಿಧ ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದು, ಟ್ರೇಲರ್ ಸಖತ್ ಹವಾ ಕ್ರಿಯೇಟ್ ಮಾಡಿದೆ. ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, 24 ಗಂಟೆಗಳ ನಂತರ, 'ಜವಾನ್' ಟ್ರೇಲರ್ ಎಲ್ಲಾ ಭಾಷೆಗಳಲ್ಲಿ 37 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಹಿಂದಿಯಲ್ಲಿ 29 ಮಿಲಿಯನ್, ತಮಿಳಿನಲ್ಲಿ 4.9 ಮತ್ತು ತೆಲುಗಿನಲ್ಲಿ 3.6 ಮಿಲಿಯನ್ ವೀಕ್ಷಣೆ ಪಡೆದಿದೆ. ಇದಲ್ಲದೆ, ಶಾರುಖ್ ಖಾನ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿಸ್, ಟ್ವಿಟರ್‌ನಲ್ಲಿ ಜವಾನ್ ಟ್ರೇಲರ್ ಸಾಮಾಜಿಕ ಮಾಧ್ಯಮದ ಎಲ್ಲಾ ವಿಭಿನ್ನ ವೇದಿಕೆಗಳಲ್ಲಿ 102 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದೆ.
ಟೀಸರ್ಗೂ ಭರ್ಜರಿ ರೆಸ್ಪಾನ್ಸ್
ಅಟ್ಲಿ ನಿರ್ದೇಶನದ ಜವಾನ್ ಟೀಸರ್ ಕೂಡ ಸಾಕಷ್ಟು ಯಶಸ್ಸು ಕಂಡಿತ್ತು. 'ಜವಾನ್' ಟೀಸರ್ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ 112 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿತ್ತು.
ಮುಂಗಡ ಬುಕ್ಕಿಂಗ್ ಆರಂಭ
ಶಾರುಖ್ ಖಾನ್ 'ಜವಾನ್' ಬಿಡುಗಡೆಗೆ 6 ದಿನಗಳು ಉಳಿದಿವೆ. ಹೀಗಿರುವಾಗ ಸಿನಿಮಾ ಟಿಕೆಟ್ ಮುಂಗಡ ಬುಕ್ಕಿಂಗ್ ಕೂಡ ಶುರುವಾಗಿದೆ. ಶಾರುಖ್ ಖಾನ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವಿಶೇಷ ವಿಡಿಯೋ ಮೂಲಕ ಮುಂಗಡ ಬುಕ್ಕಿಂಗ್ ಪ್ರಾರಂಭದ ಬಗ್ಗೆ ತಿಳಿಸಿದ್ದಾರೆ. 'ಜವಾನ್'ಗಾಗಿ ಇದುವರೆಗೆ 41 ಸಾವಿರ ಟಿಕೆಟ್‌ಗಳ ಮುಂಗಡ ಬುಕ್ಕಿಂಗ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಅಭಿನಯದ 'ಜವಾನ್' ಸೆಪ್ಟೆಂಬರ್ 7 ರಂದು ಥಿಯೇಟರ್‌ಗೆ ಬರಲಿದೆ.