ಒಂದೇ ದಿನ ರಿಲೀಸ್​ ಆಗಲಿದೆ ಸ್ಟಾರ್​ ನಟ-ನಟಿಯ ಸಿನಿಮಾ; ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ?

Untitled design - 2023-08-14T173752.279
Published on

ಮುಂಬೈ: ಬಾಲಿವುಡ್​ ಕಿಂಗ್​ ಖಾನ್​, ನಟ ಶಾರೂಖ್ ಖಾನ್​ ಅಭಿನಯದ ಬಹುನಿರೀಕ್ಷಿತ ಚಿತ್ರ 'ಜವಾನ್'​ ಈ ಹಿಂದೆಯೇ ನಿಗದಿಪಡಿಸಿದಂತೆ ಸೆಪ್ಟೆಂಬರ್​ 7 ರಂದು ರಿಲೀಸ್​ ಆಗಲಿದೆ. ಆದ್ರೆ, ಇದೀಗ ಈ ದಿನಾಂಕದಂದೇ ಟಾಲಿವುಡ್​ ಸುಂದರಿ ಅನುಷ್ಕಾ ಶೆಟ್ಟಿ ನಟನೆಯ 'ಮಿಸ್ ಶೆಟ್ಟಿ ಮಿಸೆಸ್ ಪೋಲಿಶೆಟ್ಟಿ' ಚಿತ್ರವು ಬಿಡುಗಡೆಯಾಗಲಿದೆ ಎಂಬ ಸುದ್ದಿ ಈಗ ಅಧಿಕೃತವಾಗಿ ಪ್ರಕಟಗೊಂಡಿದೆ.

ಅಟ್ಲಿ ಕುಮಾರ್ ನಿರ್ದೇಶನದಲ್ಲಿ ತಯಾರಾಗಿರುವ ಬಾಲಿವುಡ್ ಚಿತ್ರ 'ಜವಾನ್' ಸೆಪ್ಟೆಂಬರ್ 7, 2023 ರಂದು ಬಹುತೇಕ ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಮಧ್ಯೆ ರಿಲೀಸ್​ ಡೇಟ್​ನಲ್ಲಿ ಸಾಕಷ್ಟು ಗೊಂದಲ ಮಾಡಿಕೊಂಡಿದ್ದ 'ಮಿಸ್ ಶೆಟ್ಟಿ ಮಿಸೆಸ್ ಪೋಲಿಶೆಟ್ಟಿ' ಚಿತ್ರತಂಡ, ಇದೀಗ ತಮ್ಮ ಚಿತ್ರದ ಓಪನಿಂಗ್​ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ವಿವಿಧ ಭಾಷೆಯ ಬಹುನಿರೀಕ್ಷಿತ ಸಿನಿಮಾಗಳು ಒಂದೇ ದಿನ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಅನುಷ್ಕಾ ಶೆಟ್ಟಿ ಮತ್ತು ಶಾರೂಖ್​ ಖಾನ್​ ಅವರ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುವ ಮೂಲಕ ಬಾಕ್ಸ್​ ಆಫೀಸ್​​ನಲ್ಲಿ ಭಾರೀ ಪೈಪೋಟಿ ನೀಡಲಿದೆ ಎಂಬ ನಿರೀಕ್ಷೆಗಳು ಹೆಚ್ಚಿವೆ. ಈ ಬಗ್ಗೆ ಇಬ್ಬರ ಫ್ಯಾನ್ಸ್ ಕೂಡ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ, ಸಾನ್ಯ ಮಲ್ಹೋತ್ರಾ, ಪ್ರಿಯಾಮಣಿ, ಸುನೀಲ್​ ಗ್ರೋವರ್​, ಯೋಗಿ ಬಾಬು ಸೇರಿದಂತೆ ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

'ಮಿಸ್ ಶೆಟ್ಟಿ ಮಿಸೆಸ್ ಪೋಲಿಶೆಟ್ಟಿ' ಚಿತ್ರದಲ್ಲಿ ನಾಯಕನಾಗಿ ನವೀನ್​ ಪೋಲಿಶೆಟ್ಟಿ, ನಾಯಕಿಯಾಗಿ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದಾರೆ. ಜಯಸುಧಾ, ಮುರುಳಿ ಶರ್ಮ, ಅಭಿನವ್ ಗೋಮಟಮ್​, ತುಳಸಿ ಸೇರಿದಂತೆ ಮುಂತಾದವರ ತಾರಗಣ ಸಿನಿಮಾದಲ್ಲಿದೆ. ಯುವಿ ಕ್ರಿಯೇಷನ್ಸ್ ನಿರ್ಮಿಸಿದ ಮತ್ತು ಮಹೇಶ್ ಬಾಬು ನಿರ್ದೇಶನದ ಚಿತ್ರಕ್ಕೆ ರಾಧನ್ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net