ಎಮ್ಮೆಮಾಡು ಪಂಚಾಯಿತಿಯಿಂದ ಕಾಲ್ನಡಿಗೆ ಜಾಥಾ

ಎಮ್ಮೆಮಾಡು ಪಂಚಾಯಿತಿಯಿಂದ ಕಾಲ್ನಡಿಗೆ ಜಾಥಾ
Published on

ನಾಪೋಕ್ಲು: ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳೊಂದಿಗೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಹರ್‌ಘರ್ ತಿರಂಗಾದ ಮಹತ್ವವನ್ನು ಸಾರುವ ಘೊಷಣೆಗಳನ್ನು ಕೂಗುತ್ತಾ ಫ್ರೌಡಶಾಲೆ ಮೈದಾನದಿಂದ ಎಮ್ಮೆಮಾಡು ಪಟ್ಟಣದ ಮೂಲಕ ಗ್ರಾಮ ಪಂಚಾಯಿತಿವರೆಗೆ ಜಾಥಾ ನಡೆಸಲಾಯಿತು.

ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಚಕ್ಕೇರ ಇಸ್ಮಾಯಿಲ್, ಗಫೂರ್ ಪಡಿಯಾಣಿ, ಟಿ.ಕೆ.ಯೂಸೂಫ್ ಅಭಿಯಾನದ ಸಂದೇಶ ತಿಳಿಸಿದರು.

ಉಪಾಧ್ಯಕ್ಷ ಚಂಬಾರಂಡ ಐಸಮ್ಮ, ಸದಸ್ಯ ಆಯಿಷಾ, ಕಂಬೇರ ಅಬ್ಸತ್, ಮುಖ್ಯ ಶಿಕ್ಷಕ ಪ್ರಸನ್ನ ಕುಮಾರ್, ಕಾರ್ಯದರ್ಶಿ ಪಾರ್ವತಿ, ಪರಂಬು ಪಡಿಯಾಣಿ, ಎಮ್ಮೆಮಾಡು ಪ್ರಾಥಮಿಕ ಶಾಲೆಯ ಅಧ್ಯಾಪಕರು ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net