ಮಗನಿಗೆ 'RRR' ಸಿನಿಮಾ ಅರ್ಥ ಮಾಡಿಸಲು ಸ್ಕ್ರಿಪ್ಟ್​​​ ಬುಕ್​ ರಚಿಸಿದ ತಾಯಿ

ck2524ro_rrr_625x300_25_March_23 (1)
Published on

ಜಪಾನ್​​: ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ಎಸ್​.ಎಸ್​.ರಾಜಮೌಳಿ ನಿರ್ದೇಶನದ ರಾಮ್​ಚರಣ್​ ತೇಜ-ಜೂ.ಎನ್​ಟಿಆರ್​ ಅಭಿನಯದ RRR ಚಿತ್ರ ಬಿಡುಗಡೆಯಾಗಿ ವರ್ಷ ಕಳೆಯುತ್ತ ಬಂದರೂ ಸಿನಿಮಾ ಮೇಲಿನ ಕ್ರೇಜ್​ ಮಾತ್ರ ಇನ್ನೂ ಕಡಿಮೆ ಆಗಿಲ್ಲ.

ಇದೀಗ ಜಪಾನ್​ನಲ್ಲಿ ಮಹಿಳೆಯೊಬ್ಬರು ತಮ್ಮ 7 ವರ್ಷದ ಮಗುವಿಗೆ RRR ಸಿನಿಮಾವನ್ನು ಸುಲಭವಾಗಿ ಅರ್ಥ ಮಾಡಿಸುವ ಸಲುವಾಗಿ ಪ್ಲಿಫ್​ ಪುಸ್ತಕ ತಯಾರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಪ್ಲಿಫ್​ ಪುಸ್ತಕದಲ್ಲಿ ಮಹಿಳೆ ರಾಮ್​ ಚರಣ್​-ಜೂ.ಎನ್​ಟಿಆರ್​ ಅವರ ಚಿತ್ರಗಳನ್ನ ಬಿಡಿಸಿದ್ದು ಜಪಾನ್​ ಭಾಷೆಯಲ್ಲಿ ಅರ್ಥ ಮಅಡಿಸುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚಿಗೆ ಚಿತ್ರವು ನಾಟು-ನಾಟು ಹಾಡಿಗೆ ಒರಿಜಿನಲ್​ ಕ್ಯಾಟಗರಿಯಲ್ಲಿಉ ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net