ಸೂರ್ಯನ ಶಾಖವನ್ನು ಎದುರಿಸುತ್ತಾ ಕೆಲಸ ಮಾಡಲು ವಿನೂತನ 'ಫ್ಯಾನ್ ಶರ್ಟ್'!

fanf
Published on

ಹೊಸದಾದ ಅವಿಶ್ಕಾರ ಮತ್ತು ಹೊಸದನ್ನ ಏನಾದ್ರು ತಯಾರಿಸೋದ್ರಲ್ಲಿ ಜಪಾನ್ ಹೆಸರುವಾಸಿಯಾಗಿರೋ ದೇಶ. ಇದೀಗ ಇದೇ ಜಪಾನ್‌ನಲ್ಲಿ ಸೆರೆಯಾದ ವಿಡಿಯೋವೊಂದು ವೈರಲ್ ಆಗುತ್ತಿದೆ.


ಬೇಸಿಗೆಯಲ್ಲಿ ತುಂಬಾ ಸೆಖೆಯಾದಾಗ ನಾವು ಫ್ಯಾನ್​ ಅಥವಾ ಎಸಿ ಹಾಕಿಕೊಳ್ತೀವಿ. ಜಾಸ್ತಿ ಅಂದ್ರೆ ಪುಟ್ಟ ಫ್ಯಾನ್​ ಒಂದನ್ನ ಬ್ಯಾಗ್​ನಲ್ಲಿ ಕ್ಯಾರಿ ಮಾಡುತ್ತೇವೆ.
ಆದ್ರೆ ಸುಡುವ ಶಾಖವನ್ನು ಎದುರಿಸುತ್ತಾ ಕರ್ತವ್ಯ ನಿರ್ವಹಿಸಲು ಸುಲಭವಾಗುವಂತಹ ನವೀನ ಉಡುಪಿನ ದೃಶ್ಯವಿದು. ಅದೇ ಫ್ಯಾನ್‌ ಶರ್ಟ್‌…! ಕೇಳುವಾಗಲೇ ಅಚ್ಚರಿಯಾಗಬಹುದು. ಸದ್ಯ ಇಂತಹದ್ದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.


ಸೂರ್ಯನ ಶಾಖವನ್ನು ಎದುರಿಸುತ್ತಾ ಯಾವುದೇ ಕೆಲಸವನ್ನ ಮಾಡಬಹುದಾದ ವಿನೂತನ ಶರ್ಟ್ ಒಂದನ್ನ ಜಪಾನಿನಲ್ಲಿ ಅಭಿವೃದ್ಧಿಪಡಿಸಲಾಗಿದೆ.
@Rainmaker1973 ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಜೊತೆಗೆ ಇಲ್ಲಿ ಗಮನ ಸೆಳೆಯುವುದು ಈ ವ್ಯಕ್ತಿ ಧರಿಸಿದ ಶರ್ಟ್.

ಗಾಳಿಯಿಂದ ತುಂಬಿರುವ ಶರ್ಟ್ ಇಲ್ಲಿ ಗಮನ ಸೆಳೆಯುತ್ತದೆ. ಈ ಶರ್ಟ್‌ನೊಳಗೆ ಗಾಳಿ ತುಂಬಲು ಕಾರಣವೂ ಇದೆ. ಅದು ಶರ್ಟ್‌ನಲ್ಲೇ ಅಳವಡಿಸಿರುವ ಫ್ಯಾನ್…! ಹೊರಗಿನ ಗಾಳಿಯನ್ನು ಸೆಳೆಯುವ ಸಲುವಾಗಿ ಫ್ಯಾನ್‌ಗಳನ್ನು ಅಳವಡಿಸುವ ಮೂಲಕ ಈ ಶರ್ಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಶರ್ಟ್‌ನಲ್ಲಿ ಅಳವಡಿಸಿರುವ ಈ ಫ್ಯಾನ್ ಬೆವರನ್ನು ಆವಿಯಾಗಿಸಲು ಮತ್ತು ಶಾಖದಿಂದ ದೇಹವನ್ನು ಮುಕ್ತಿಗೊಳಿಸಿ ತಂಪಾಗಿಸಲು ಸಹಾಯ ಮಾಡುತ್ತದೆ.

ಲಭ್ಯ ಮಾಹಿತಿ ಪ್ರಕಾರ ಸೋನಿ ಮಾಜಿ ಇಂಜಿನಿಯರ್ ಇಚಿಗಯಾ ಹಿರೋಷಿ ವಿನ್ಯಾಸಗೊಳಿಸಿದ ಫ್ಯಾನ್ ಶರ್ಟ್‌ ಇದು. ಇವರು ಈಗ ತಮ್ಮದೇ ಆದ ಕಂಪನಿಯನ್ನು ನಡೆಸುತ್ತಿದ್ದಾರೆ. ಈ ಆವಿಷ್ಕಾರಕ್ಕೆ 2017ರಲ್ಲಿ ಕಂಪನಿ ಸರ್ಕಾರದ ಪ್ರಶಸ್ತಿಯನ್ನೂ ಪಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net